ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಡಿವೈಇಎಸ್‌

ಬ್ಯಾಸ್ಕೆಟ್‌ಬಾಲ್‌: ಸಂಜನಾ, ಹರ್ಷಿತಾ ಅಪೂರ್ವ ಆಟ
Last Updated 23 ನವೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ಸಂಜನಾ ಮತ್ತು ಹರ್ಷಿತಾ ಅವರ ಅಪೂರ್ವ ಆಟದ ಬಲದಿಂದ ವಿದ್ಯಾನಗರದ ಡಿವೈಇಎಸ್‌ ತಂಡ ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಪೈಪೋಟಿಯಲ್ಲಿ ಡಿವೈಇಎಸ್‌ 78–77 ಪಾಯಿಂಟ್ಸ್‌ನಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 36–35ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಡಿವೈಇಎಸ್‌ ತಂಡ ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಸಂಜನಾ ಮತ್ತು ಹರ್ಷಿತಾ ಕ್ರಮವಾಗಿ 25 ಹಾಗೂ 23 ಪಾಯಿಂಟ್ಸ್‌ ಗಳಿಸಿದರು. ಮೌಂಟ್ಸ್‌ ಕ್ಲಬ್‌ ತಂಡದ ಲೋಪಮುದ್ರಾ 38 ಪಾಯಿಂಟ್ಸ್‌ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು. ರೋಷಿನಿ 13 ಪಾಯಿಂಟ್ಸ್‌ ಗಳಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಎಸ್‌.ಡಬ್ಲ್ಯು.ರೈಲ್ವೆ 66–34 ಪಾಯಿಂಟ್ಸ್‌ನಿಂದ ಬೀಗಲ್ಸ್‌ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು. ರೈಲ್ವೆ ತಂಡದ ಬಾಂಧವ್ಯ ಮತ್ತು ಅನುಷಾ ಕ್ರಮವಾಗಿ 16 ಮತ್ತು 15 ಪಾಯಿಂಟ್ಸ್‌ ಸಂಗ್ರಹಿಸಿದರು.

ವಿಜಯ ಬ್ಯಾಂಕ್‌–ಎಎಸ್‌ಸಿ ಪೈಪೋಟಿ: ವಿಜಯ ಬ್ಯಾಂಕ್‌ ಮತ್ತು ಎಎಸ್‌ಸಿ ತಂಡಗಳು ಪುರುಷರ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಮೊದಲ ಸೆಮಿಫೈನಲ್‌ನಲ್ಲಿ ವಿಜಯ ಬ್ಯಾಂಕ್‌ 76–24 ಪಾಯಿಂಟ್ಸ್‌ನಿಂದ ದೇವಾಂಗ ಯೂನಿಯನ್‌ ತಂಡದ ಎದುರು ಗೆದ್ದಿತು.

ವಿಜಯಿ ತಂಡದ ಕ್ಲಿಂಟನ್‌ 22 ಪಾಯಿಂಟ್ಸ್‌ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ 74–62 ಪಾಯಿಂಟ್ಸ್‌ನಿಂದ ಸದರ್ನ್‌ ಬ್ಲೂಸ್‌ ತಂಡವನ್ನು ಪರಾಭವಗೊಳಿಸಿತು. ಎಎಸ್‌ಸಿ ತಂಡದ ಅಜ್ಮಲ್‌ ಮತ್ತು ಪ್ರಭು ಅವರು ತಲಾ 15 ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT