ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಫೈನಲ್‌ಗೆ ಪೂಜಾ; ಲವ್ಲಿನಾಗೆ ಸೋಲು

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ನಲ್ಲಿ ಎಡವಿದ ಲವ್ಲಿನಾ
Last Updated 14 ಮೇ 2022, 14:23 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್‌ ಅಭಿಯಾನ ಅಂತ್ಯವಾಗಿದೆ. ಪೂಜಾ ರಾಣಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದಿದ್ದಾರೆ.

ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 70 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಅವರ ವಿರುದ್ಧ ಸ್ಪರ್ಧಿಸಿದ್ದ ಫೇರ್ ಚಾನ್ಸ್ ಟೀಮ್‌ನ(ನಿರಾಶ್ರಿತ ಅಥ್ಲೀಟ್‌ಗಳ ತಂಡ) ಸಿಂಡಿ ಎನ್‌ಗಾಂಬಾ 4–1ರಿಂದ ಬೌಟ್‌ ಜಯಿಸಿದರು.

ಎರಡು ಬಾರಿಯ ಏಷ್ಯಾ ಚಾಂಪಿಯನ್‌ ಪೂಜಾ 81 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ನಲ್ಲಿ 5–0ಯಿಂದ ಹಂಗರಿಯ ಟಿಮಿಯಾ ನ್ಯಾಗಿ ಎದುರು ಗೆಲುವು ಸಾಧಿಸಿದರು.

ಸೋಮವಾರ ನಡೆಯುವ ಎಂಟರಘಟ್ಟದ ಬೌಟ್‌ನಲ್ಲಿ ಪೂಜಾ, ಆಸ್ಟ್ರೇಲಿಯಾದ ಜೆಸ್ಸಿಕಾ ಬ್ಯಾಗ್ಲಿ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT