ಟೇಬಲ್ ಟೆನಿಸ್ ಟೂರ್ನಿ: ಪ್ರೀಕ್ವಾರ್ಟರ್‌ಗೆ ಮಣಿಕಾ, ಶ್ರೀಜಾ

ದೋಹಾ: ಭಾರತದ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರು ಏಷ್ಯಾ ಕಾಂಟಿನೆಂಟಲ್ ಸ್ಟೇಜ್ ಡಬ್ಲ್ಯುಟಿಟಿಸಿ ಫೈನಲ್ಸ್ ಟೇಬಲ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮಣಿಕಾ 13–11, 11–9, 11–6, 11–8ರಿಂದ ಹಾಂಗ್‌ಕಾಂಗ್‌ನ ಜು ಚೆಂಗ್‌ಜು ಎದುರು ಗೆದ್ದರು.
ಪ್ರಬಲ ಪೈಪೋಟಿ ನಡೆದ ಇನ್ನೊಂದು ಪಂದ್ಯದಲ್ಲಿ ಅಕುಲಾ 11–2, 5–11, 2–11, 5–11, 13–11, 11–9, 11–8ರಿಂದ ಚೀನಾ ತೈಪೆಯ ಚೆನ್ ಜು ಯು ಎದುರು ಜಯಿಸಿದರು.
ದಿಯಾ ಚಿತಳೆ, ಸ್ವಸ್ತಿಕಾ ಘೋಷ್ ಮತ್ತು ರೀತ್ ಟೆನ್ನಿಸನ್ ಅವರು ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ ಕೂಡ ಸೋಲು ಕಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.