ಗುರುವಾರ , ಜನವರಿ 20, 2022
15 °C

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌: ಮಣಿಕಾ ಪದಕದ ಕನಸು ಭಗ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಭಾರತದ ಮಹಿಳಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್ ವಿಭಾಗದ ತಂಡಗಳು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸೋಲು ಅನುಭವಿಸಿದವು. ಇದರೊಂದಿಗೆ ಇತಿಹಾಸ ನಿರ್ಮಿಸುವ ಮಣಿಕಾ ಬಾತ್ರಾ ಅವರ ಕನಸು ಕೈಗೂಡಲಿಲ್ಲ.

ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಮಣಿಕಾ ಹಾಗೂ ಜಿ. ಸತ್ಯನ್‌ 5-11, 2-11, 11-7, 9-11ರಿಂದ ಜಪಾನ್‌ನ ತೊಮಕಾಜು ಹರಿಮೊಟೊ ಮತ್ತು ಹೀನಾ ಹಯಾಟಾ ಎದುರು ನಿರಾಸೆ ಅನುಭವಿಸಿದರು.

ಮಹಿಳಾ ಡಬಲ್ಸ್‌ನಲ್ಲಿ ಅರ್ಚನಾ ಕಾಮತ್‌ ಜೊತೆಗೂಡಿದ್ದ ಮಣಿಕಾ, ಎಂಟರಘಟ್ಟದ ಹಣಾಹಣಿಯಲ್ಲಿ 1-11, 6-11, 8-11ರಿಂದ ಲಕ್ಷೆಂಬರ್ಗ್‌ನ ಸಾರಾ ಡಿ ನಟ್‌ ಮತ್ತು ನಿ ಕ್ಸಿಯಾ ಲಿಯಾನ್ ವಿರುದ್ಧ ಸೋಲನುಭವಿಸಿದರು.

ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಮಣಿಕಾ ಅವರಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಪದಕ ಖಚಿತವಾಗುತ್ತಿತ್ತು. ಇಲ್ಲಿ ಸೆಮಿಫೈನಲ್‌ನಲ್ಲಿ ಸೋತವರಿಗೂ ಕಂಚಿನ ಪದಕ ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು