ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ವರ್ಷದ ಆಟಗಾರ ಮನ್‌ಪ್ರೀತ್‌

Last Updated 13 ಫೆಬ್ರುವರಿ 2020, 19:01 IST
ಅಕ್ಷರ ಗಾತ್ರ

ಲಾಸೆನ್: ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಆಟಗಾರನಾಗಿದ್ದಾರೆ.

ಎಫ್‌ಐಎಚ್‌, ವಿಶ್ವದ ಹಾಕಿ ಅಭಿಮಾನಿಗಳಿಂದ ಮತಗಳನ್ನು ಆಹ್ವಾನಿಸಿತ್ತು. ಮನ್‌ಪ್ರೀತ್ ಬೆಲ್ಜಿಯಂನ ಆರ್ಥರ್ ವ್ಯಾನ್ ಡೊರೆನ್ ಮತ್ತು ಅರ್ಜೆಂಟಿನಾದ ಲುಕಾಸ್ ವಿಲ್ಲಾ ಅವರನ್ನು ಹಿಂದಿಕ್ಕಿದ್ದಾರೆ.

ಮನ್‌ಪ್ರೀತ್ ಶೇ. 35.2 ಮತಗಳನ್ನು ಗಳಿಸಿದ್ದಾರೆ. ಇದರಲ್ಲಿ ರಾಷ್ಟ್ರೀಯ ಕ್ರೀಡಾ ಸಂಘಟನೆಗಳು, ಮಾಧ್ಯಮಗಳು, ಅಭಿಮಾನಿಗಳು ಮತ್ತು ಆಟಗಾರರ ಮತಗಳೂ ಸೇರಿವೆ. ವ್ಯಾನ್ ಡೊರೆನ್ ಶೇ 19.7 ಮತ್ತು ವಿಲ್ಲಾ 16.5 ಮತಗಳನ್ನು ಗಳಿಸಿದ್ದಾರೆ.

ಬೆಲ್ಜಿಯಂನ ವಿಕ್ಟರ್ ವೆಂಗೆಂಜ್ ಮತ್ತು ಆಸ್ಟ್ರೇಲಿಯಾದ ಆ್ಯರನ್ ಜಲೆವಸ್ಕಿ ಮತ್ತು ಎಡ್ಡಿ ಒಕೆಂಡನ್ ಕೂಡ ಈ ಪ್ರಶಸ್ತಿ ಸುತ್ತಿನ ಸ್ಪರ್ಧೆಯಲ್ಲಿದ್ದರು.

ಮನ್‌ಪ್ರೀತ್ 2011ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅವರು 2012 ಮತ್ತು 2016ರ ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಒಟ್ಟು 260 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಹೋದ ವರ್ಷ ನಡೆದ ಎಫ್‌ಐಎಚ್ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಮನಪ್ರೀತ್ ನಾಯಕತ್ವದ ಭಾರತ ತಂಡ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿತ್ತು.

‘ಈ ಗೌರವ ಸಂದಿರುವುದು ನನಗೆ ಸಂತಸ ತಂದಿದೆ. ನಮ್ಮ ತಂಡಕ್ಕೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ. ನನ್ನ ಆಯ್ಕೆಗಾಗಿ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಮನ್‌ಪ್ರೀತ್ ಹೇಳಿದ್ದಾರೆ.

ಭಾರತದ ಯುವ ಮಿಡ್‌ಫೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಮತ್ತು ಮಹಿಳಾ ತಂಡದ ಸ್ಟ್ರೈಕರ್ ಲಾಲ್‌ರೆಮಿಸಿಯಾಮಿ ಉದಯೋನ್ಮುಖ ತಾರೆ ಗೌರವ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT