ಟೇಕ್‌ ಸೊಲ್ಯೂಷನ್‌ ಮಾಸ್ಟರ್ಸ್‌ ಗಾಲ್ಫ್‌: ಶ್ರೀರೊಜ್‌ಗೆ ಅಗ್ರಸ್ಥಾನ

7

ಟೇಕ್‌ ಸೊಲ್ಯೂಷನ್‌ ಮಾಸ್ಟರ್ಸ್‌ ಗಾಲ್ಫ್‌: ಶ್ರೀರೊಜ್‌ಗೆ ಅಗ್ರಸ್ಥಾನ

Published:
Updated:
Deccan Herald

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಥಾಯ್ಲೆಂಡ್‌ನ ಥಾಮನೂನ್‌ ಶ್ರೀರೊಜ್‌ ಅವರು ಟೇಕ್‌ ಸೊಲ್ಯೂಷನ್‌ ಮಾಸ್ಟರ್ಸ್‌ ಗಾಲ್ಫ್‌ ಟೂರ್ನಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ (ಕೆಜಿಎ)  ಗುರುವಾರ ನಡೆದ ಮೊದಲ ಸುತ್ತಿನ ಪೈಪೋಟಿಯಲ್ಲಿ ಶ್ರೀರೊಜ್‌ ಒಟ್ಟು 62 ಸ್ಕೋರ್‌ ಕಲೆಹಾಕಿ ಗಮನ ಸೆಳೆದರು.

ಭಾರತದ ಫಿರೋಜ್‌ ಸಿಂಗ್‌ ಗರೇವಾಲ್‌, ಥಾಯ್ಲೆಂಡ್‌ನ ಡಾನ್‌ಥಾಯ್‌ ಬೂನ್ಮಾ ಮತ್ತು ಸುರಾಡಿಟ್‌ ಯಾಂಗ್‌ಚಾರೊಯಿನ್‌ಚಾಯ್‌ ಜಿಂಬಾಬ್ವೆಯ ಸ್ಕಾಟ್‌ ವಿನ್ಸೆಂಟ್‌ ಮತ್ತು ಅರ್ಜೆಂಟೀನಾದ ಮಿಗುಯೆಲ್‌ ಕಾರ್ಬಲ್ಲೊ ಅವರು ಜಂಟಿ ಎರಡನೆ ಸ್ಥಾನದಲ್ಲಿ ಕಾಣಿಸಿಕೊಂಡರು. ಇವರು ತಲಾ 66 ಸ್ಕೋರ್‌ ಸಂಗ್ರಹಿಸಿದರು.

ಭಾರತದ ಓಂ ಪ್ರಕಾಶ್‌ ಚೌವ್ಹಾಣ್‌, ಖಾಲಿನ್‌ ಜೋಷಿ, ಥಾಯ್ಲೆಂಡ್‌ನ ಸೆಟ್ಟೀ ಪ್ರಕೊಂಗ್‌ವೆಚ್‌, ಆಸ್ಟ್ರೇಲಿಯಾದ ಜೇಕ್‌ ಮೆಕ್‌ಲಿಯೊಡ್‌, ಮೇವರಿಕ್‌ ಆ್ಯಂಟ್‌ಕ್ಲಿಫ್‌, ಶ್ರೀಲಂಕಾದ ಅನುರಾ ರೋಹನಾ ಮತ್ತು ಥಾಯ್ಲೆಂಡ್‌ನ ಅರ್ನಾಲ್ಡ್‌ ವೊಂಗ್‌ವಾನಿಜ್‌ ಅವರು ಮೊದಲ ದಿನದ ಅಂತ್ಯಕ್ಕೆ ಜಂಟಿ ಮೂರನೆ ಸ್ಥಾನದಲ್ಲಿದ್ದಾರೆ. ಇವರ ಖಾತೆಯಲ್ಲಿ ತಲಾ 67 ಸ್ಕೋರ್‌ಗಳಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !