ಗುರುವಾರ , ಜೂನ್ 17, 2021
21 °C
ರಾಜ್ಯ ಮಿನಿ ಒಲಿಂಪಿಕ್ಸ್‌: ಜಿಮ್ನಾಸ್ಟಿಕ್ಸ್‌ನಲ್ಲಿ ಸಮೃದ್ಧ್, ದಾನೇಶ್ವರಿಗೆ ಪದಕ

ವಾಲಿಬಾಲ್‌: ಬೆಂಗಳೂರು, ಕೊಪ್ಪಳಕ್ಕೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಹಾಗೂ ಕೊಪ್ಪಳ ತಂಡಗಳು ರಾಜ್ಯ ಮಿನಿ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡವು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿರುವ ರಾಜ್ಯ ಮಿನಿ ಒಲಿಂಪಿಕ್‌ ಕ್ರೀಡಾಕೂಟದ ಬಾಲಕರ ಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರ ತಂಡವು ತುಮಕೂರು ತಂಡದ ಎದುರು 25–17, 25–19ರಿಂದ ಗೆದ್ದಿತು. ಬಾಲ ಕಿಯರ ವಿಭಾಗದಲ್ಲಿ ಕೊಪ್ಪಳ ತಂಡವು ದಕ್ಷಿಣ ಕನ್ನಡ ತಂಡವನ್ನು 22–25, 27–17, 13–15ರಿಂದ ಸೋಲಿಸಿತು.

ಬಾಲಕರ ನೆಟ್‌ಬಾಲ್‌ ಕ್ರೀಡಾಕೂಟದಲ್ಲಿ ಚಿತ್ರದುರ್ಗ ತಂಡ 17–5ರಿಂದ ಬೆಂಗಳೂರು ತಂಡವನ್ನು ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ತಂಡ 22–6ರಿಂದ ಹಾಸನ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.

ಹಾಕಿ: ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ತುಳಸಿ ಹಾಗೂ ಸೌಮ್ಯಾ ಎಚ್‌.ವಿ ಅವರು ಸಾಧಿಸಿದ ಹ್ಯಾಟ್ರಿಕ್‌ ಬಲದಿಂದ ಹಾಕಿ ಹಾಸನ ಬಾಲಕಿಯರ ತಂಡವು 9–0ಯಿಂದ ಬೆಳಗಾವಿ ತಂಡವನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಹಾಕಿ ಧಾರವಾಡ ತಂಡವು 4–1 ಗೋಲುಗಳಿಂದ ಬೆಂಗಳೂರು ನಗರ ತಂಡವನ್ನು ಸೋಲಿಸಿತು.

ಜಿಮ್ನಾಸ್ಟಿಕ್‌ನಲ್ಲಿ ಸಮೃದ್ಧ್‌ ಮಿಂಚು: ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಧಾರವಾಡದ ಸಮೃದ್ಧ್ ಹಿರೇಗೌಡರ್ ಒಂದು ಚಿನ್ನ ಹಾಗೂ ಮೂರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾನೆ. ಒಟ್ಟು 59.60 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಬಾಲಕಿಯರ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ದಾನೇಶ್ವರಿ ಕಮ್ಮಾರ ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು 35.30 ಅಂಕ ಗಳಿಸಿ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು