ಬುಧವಾರ, ಜನವರಿ 22, 2020
25 °C

ಮಿಥುನ್‌ ಚಾಂಪಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಶ್ರೀಲಂಕಾದ ಮಿಥುನ್ ಪೆರೆರಾ ಅವರು ರಾಯಲ್‌ ಕಲ್ಕತ್ತಾ ಗಾಲ್ಫ್‌ ಕ್ಲಬ್‌ (ಆರ್‌ಸಿಜಿಸಿ) ಓಪನ್‌ ಗಾಲ್ಪ್‌ ಚಾಂಪಿಯನ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಇದುವರೆಗೆ ಏಳು ಟ್ರೋಫಿ ಗೆದ್ದಿರುವ ಮಿಥುನ್‌ ಭಾನುವಾರ, ಪ್ರಶಸ್ತಿ ಗೆಲ್ಲುವ ಮೂಲಕ ₹ 6,46000 ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು. ಒಟ್ಟು ₹40 ಲಕ್ಷ ಬಹುಮಾನ ಮೊತ್ತದ ಟೂರ್ನಿ ಇದಾಗಿತ್ತು.

ಲಖನೌನ ಸಂಜೀವ್‌ಕುಮಾರ್‌ 2ನೇ ಸ್ಥಾನ ಗಳಿಸಿದರು. ಮುಂಬೈನ ಅನಿಲ್‌ ಬಜರಂಗ್‌ ಮಾನೆ ಹಾಗೂ ದೆಹಲಿಯ ಶಮಿಮ್‌ ಖಾನ್‌ ಜಂಟಿ ಮೂರನೇ ಸ್ಥಾನ ಪಡೆದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು