ಶನಿವಾರ, ಸೆಪ್ಟೆಂಬರ್ 21, 2019
21 °C

ಮ್ಯಾನ್ಮಾರ್ ಓಪನ್: ಭರವಸೆಯಲ್ಲಿ ಪಂಕಜ್

Published:
Updated:
Prajavani

ಮಂದಾಲಯ್‌ (ಮ್ಯಾನ್ಮಾರ್): ವಿಶ್ವ ಚಾಂಪಿಯನ್ ಪಟ್ಟವನ್ನು 21 ಬಾರಿ ಮುಡಿಗೇರಿಸಿಕೊಂಡಿರುವ ಪಂಕಜ್ ಅಡ್ವಾನಿ, ಮಂಗಳವಾರ ಆರಂಭವಾಗಲಿರುವ ಮ್ಯಾನ್ಮಾರ್ ಓಪನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭರವಸೆಯಲ್ಲೇ ಕಣಕ್ಕೆ ಇಳಿಯಲಿದ್ದಾರೆ.

ಮೂರು ದಿನಗಳ ಸ್ಪರ್ಧೆಯು ಮುಂಬರುವ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕ್ಯೂ ಸ್ಪೋರ್ಟ್ಸ್‌ಪಟುಗಳಿಗೆ ‘ಅಭ್ಯಾಸ’ ಮಾಡಲು ಉತ್ತಮ ಅವಕಾಶ ಕಲ್ಪಿಸಲಿದೆ.

‘ವಿಶ್ವ ಚಾಂಪಿಯನ್‌ಷಿಪ್‌ಗೆ ಸಜ್ಜಾಗಲು ಮ್ಯಾನ್ಮಾರ್ ಓಪನ್ ಉತ್ತಮ ವೇದಿಕೆಯಾಗಲಿದೆ. ನಾನು ವಿಶ್ವ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದು ಅದಕ್ಕೆ ಇಲ್ಲಿಂದಲೇ ನಾಂದಿ ಹಾಡಲಿದ್ದೇನೆ’ ಎಂದು ಅಡ್ವಾನಿ ಹೇಳಿದರು.

Post Comments (+)