ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಾಂಕ್‌ ಮಿಂಚು: ಕರ್ನಾಟಕದ ಜಯದ ಓಟ

ಚೆನ್ನೈನಲ್ಲಿ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌
Last Updated 5 ಏಪ್ರಿಲ್ 2022, 14:02 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.

ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಶಶಾಂಕ್ ರೈ ಗಳಿಸಿದ 14 ಪಾಯಿಂಟ್ಸ್ ನೆರವಿನಿಂದ 69–44ರಿಂದ ರಾಜಸ್ಥಾನ ತಂಡವನ್ನು ಪರಾಭವಗೊಳಿಸಿತು. ರಾಜ್ಯ ತಂಡದ ಪರ ಪ್ರತ್ಯಾಂಶು ತೋಮರ್‌ 12, ಹರೀಶ್ ಮುತ್ತು ಮತ್ತು ಅಭಿಷೇಕ್ ಗೌಡ ತಲಾ 11 ಪಾಯಿಂಟ್ಸ್ ಗಳಿಸಿದರು.

ಈ ಜಯದೊಂದಿಗೆ ಕರ್ನಾಟಕ ತಂಡವು ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು. ಪುರುಷರ ವಿಭಾಗದಲ್ಲಿ ಪಂಜಾಬ್, ಸರ್ವಿಸಸ್‌, ತಮಿಳುನಾಡು, ಉತ್ತರಾಖಂಡ, ಹರಿಯಾಣ, ರೈಲ್ವೇಸ್‌ ತಂಡಗಳೂ ಎರಡನೇ ಸುತ್ತಿಗೆ ಕಾಲಿಟ್ಟವು.

ದಿನದ ಇನ್ನುಳಿದ ಪಂದ್ಯಗಳಲ್ಲಿ ಹರಿಯಾಣ 74–57ರಿಂದ ಪಶ್ಚಿಮ ಬಂಗಾಳ ಎದುರು, ಸರ್ವಿಸಸ್‌ 77–55ರಿಂದ ಉತ್ತರ ಪ್ರದೇಶ ಎದುರು, ಪಂಜಾಬ್ 96–58ರಿಂದ ತೆಲಂಗಾಣ ವಿರುದ್ಧ ಜಯ ಸಾಧಿಸಿದವು.

ಮಹಿಳೆಯರ ವಿಭಾಗದಲ್ಲಿ ರೈಲ್ವೇಸ್‌ 120–66ರಿಂದ ದೆಹಲಿ ಎದುರು, ತೆಲಂಗಾಣ 54–37ರಿಂದ ಒಡಿಶಾ ಎದುರು ಜಯ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT