ಭಾನುವಾರ, ಫೆಬ್ರವರಿ 28, 2021
31 °C

ಮಹಿಳಾ ರಾಷ್ಟ್ರೀಯ ಕುಸ್ತಿ ಶಿಬಿರ ಅಕ್ಟೋಬರ್‌ 10ರಿಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹಿಳೆಯರ ರಾಷ್ಟ್ರೀಯ ಕುಸ್ತಿ ಶಿಬಿರವು ಅಕ್ಟೋಬರ್‌ 10ರಿಂದ ಲಖನೌನಲ್ಲಿ ನಡೆಯಲಿದೆ. ಲಖನೌನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಶಿಬಿರ ನಡೆಯಲಿದ್ದು, ಒಂದು ವೇಳೆ ಶಿಬಿರಕ್ಕೆ ಹಾಜರಾಗದಿದ್ದರೆ ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್‌ 1ರಂದು ಶಿಬಿರ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

ಇಬ್ಬರು ಪ್ರಮುಖ ಕುಸ್ತಿಪಟುಗಳಾದ ವಿನೇಶಾ ಪೋಗಟ್ ಹಾಗೂ ದೀಪಕ್‌ ಪುನಿಯಾ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ಹಲವರ ಆತಂಕಕ್ಕೂ ಕಾರಣವಾಗಿತ್ತು.

ಕೋವಿಡ್‌–19ನಿಂದ ಉಂಟಾದ ಪರಿಸ್ಥಿತಿಯ ಅವಲೋಕನ ನಡೆಸಿದ ಡಬ್ಲ್ಯುಎಫ್‌ಐ ಸಾಯ್‌ನ ಸಲಹೆಯೊಂದಿಗೆ ಶಿಬಿರವನ್ನು ಆರಂಭಿಸಲು ಮನಸ್ಸು ಮಾಡಿದೆ.  ಒಲಿಂಪಿಕ್ಸ್‌ನಲ್ಲಿ ಆಯೋಜಿಸಲಾಗುವ 50, 53, 57, 62, 68 ಹಾಗೂ 76 ಕೆಜಿ ವಿಭಾಗಗಳಲ್ಲಿ ತರಬೇತಿ ಶಿಬಿರ ನಡೆಯಲಿದೆ. ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ.

‘ಲಖನೌನಲ್ಲಿ ಅಕ್ಟೋಬರ್‌ 10ರಂದು ಶಿಬಿರವನ್ನು ಆರಂಭಿಸುತ್ತಿದ್ದೇವೆ. ಪ್ರತಿ ವಿಭಾಗದಲ್ಲಿ ಮೂರು ಕುಸ್ತಿಪಟುಗಳಿಗೆ ತರಬೇತಿಯ ಅವಕಾಶ ನೀಡಲಾಗಿದೆ‘ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ಹೇಳಿದ್ದಾರೆ.

ಮ್ಯಾಟ್‌ ತರಬೇತಿ ಆರಂಭಕ್ಕೂ ಮುನ್ನ ಕುಸ್ತಿಪಟುಗಳು 14 ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಬೇಕು ಹಾಗೂ ಕೋವಿಡ್‌ ’ನೆಗೆಟಿವ್‌‘ ಪ್ರಮಾಣಪತ್ರ ತರಬೇಕಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು