ಶುಕ್ರವಾರ, ಮಾರ್ಚ್ 24, 2023
30 °C
ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಕರ್ನಾಟಕ ಬಾಲಕರಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಬಾಲಕರ ತಂಡದವರು ಇಲ್ಲಿ ನಡೆಯುತ್ತಿರುವ 72ನೇ ರಾಷ್ಟ್ರೀಯ ಜೂನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದರು. ಆದರೆ ಬಾಲಕಿಯರಿಗೆ ನಿರಾಸೆ ಎದುರಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಾಲಕರ ವಿಭಾಗದ ಲೀಗ್‌ ಪಂದ್ಯದಲ್ಲಿ ಕರ್ನಾಟಕ 67–55 ರಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ಆತಿಥೇಯ ತಂಡ 39–17 ರಲ್ಲಿ ಮುನ್ನಡೆ ಸಾಧಿಸಿತ್ತು. ಕರ್ನಾಟಕದ ವಿಷ್ಣು 24 ಪಾಯಿಂಟ್ಸ್ ಗಳಿಸಿ ಮಿಂಚಿದರು. ಕೆ.ಲಿಂಗೇಶ್ 14, ಸಂಕೇತ್‌ ಹಾಗೂ ಶಶಾಂಕ್‌ ಗೌಡ ತಲಾ 9 ಪಾಯಿಂಟ್ಸ್‌ ತಂದಿತ್ತರು.

ಮಹಿಳೆಯರ ವಿಭಾಗದಲ್ಲಿ ಕರ್ನಾಟಕ 62–68 ರಲ್ಲಿ ಮಹಾರಾಷ್ಟ್ರ ಕೈಯಲ್ಲಿ ಸೋತಿತು. ತಲಾ 18 ಪಾಯಿಂಟ್ಸ್‌ ಗಳಿಸಿದ ಮಾನಸಿ ನಿರ್ಮಲಕರ್‌ ಮತ್ತು ಆನ್ಯಾ ಭಾಸ್ಕರ್‌ ಅವರು ಮಹಾರಾಷ್ಟ್ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆತಿಥೇಯ ತಂಡದ ಪರ ಮೇಖಲಾ ಗೌಡ 13, ಆದ್ಯಾ ಗೌಡ 10 ಪಾಯಿಂಟ್ಸ್‌ ತಂದಿತ್ತರು.

ತಮಿಳುನಾಡಿನ ಪುರುಷರ ಹಾಗೂ ಮಹಿಳೆಯರ ತಂಡಗಳು ಸತತ ಎರಡನೇ ಗೆಲುವು ಪಡೆದು ಎಂಟರಘಟ್ಟದಲ್ಲಿ ಸ್ಥಾನ ಖಚಿತಪಡಿಸಿಕೊಂಡವು. ಪುರುಷರ ವಿಭಾಗದಲ್ಲಿ ತಮಿಳುನಾಡು 88–71 ರಲ್ಲಿ ಮಿಜೊರಾಂ ವಿರುದ್ಧ ಗೆದ್ದರೆ, ಮಹಿಳೆಯರು 133–27 ರಲ್ಲಿ ನಾಗಾಲ್ಯಾಂಡ್‌ ತಂಡವನ್ನು ಮಣಿಸಿದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಚಂಡೀಗಢ 91–65 ರಲ್ಲಿ ಒಡಿಶಾ ವಿರುದ್ಧ; ರಾಜಸ್ಥಾನ 84–63 ರಲ್ಲಿ ಕೇರಳ ವಿರುದ್ಧ; ಉತ್ತರಾಖಂಡ 93–78 ರಲ್ಲಿ ದೆಹಲಿ ವಿರುದ್ಧ; ಪಂಜಾಬ್‌ 99–45 ರಲ್ಲಿ ಮಣಿಪುರ ವಿರುದ್ಧ; ಮಧ್ಯಪ್ರದೇಶ 82–70 ರಲ್ಲಿ ಆಂಧ್ರಪ್ರದೇಶ ವಿರುದ್ಧ; ಉತ್ತರ ಪ್ರದೇಶ 123–36 ರಲ್ಲಿ ಅಸ್ಸಾಂ ವಿರುದ್ಧವೂ ಜಯಿಸಿದವು.

ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಪಶ್ಚಿಮ ಬಂಗಾಳ 125–32 ರಲ್ಲಿ ಮೇಘಾಲಯ ವಿರುದ್ಧ; ಕೇರಳ 65–62 ರಲ್ಲಿ ಮಧ್ಯಪ್ರದೇಶ ವಿರುದ್ಧ; ಚಂಡೀಗಢ 98–48 ರಲ್ಲಿ ಉತ್ತರಾಖಂಡ ವಿರುದ್ಧ; ಛತ್ತೀಸ್‌ಗಢ 115–20 ರಲ್ಲಿ ಅಸ್ಸಾಂ ವಿರುದ್ಧ; ಉತ್ತರ ಪ್ರದೇಶ 95–82 ರಲ್ಲಿ ಹರಿಯಾಣ ವಿರುದ್ಧ ಗೆದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು