ಗುರುವಾರ , ಜುಲೈ 7, 2022
23 °C

ನೀರಜ್‌ ಚೋಪ್ರಾಗೆ ಫಿನ್ಲೆಂಡ್‌ನಲ್ಲಿ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೊ ಅಥ್ಲೀಟ್‌, ಭಾರತದ ನೀರಜ್ ಚೋಪ್ರಾ ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ 24 ವರ್ಷದ ನೀರಜ್‌, ಸದ್ಯ ಟರ್ಕಿಯ ಗ್ಲೋರಿಯಾ ಸ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗುರುವಾರ ಅವರು ಫಿನ್ಲೆಂಡ್‌ಗೆ ತೆರಳಲಿದ್ದು, ಅಲ್ಲಿಯ ಕೋರ್ಟೇನ್‌ ಒಲಿಂಪಿಕ್ ತರಬೇತಿ ಕೇಂದ್ರದಲ್ಲಿ ಜೂನ್‌ 22ರವರೆಗೆ ಅಭ್ಯಾಸ ನಡೆಸಲಿದ್ದಾರೆ.

‘ಅಂದಾಜು ₹ 9.8 ಲಕ್ಷ ವೆಚ್ಚದಲ್ಲಿ ನೀರಜ್ ಅವರಿಗೆ ನಾಲ್ಕು ವಾರಗಳ ತರಬೇತಿಗೆ ಸರ್ಕಾರದ ಟಾರ್ಗೆಟ್‌ ಒಲಿಂಪಿಕ್ ಪೋಡಿಯಂ ಯೋಜನೆಯಡಿ (ಟಾಪ್ಸ್) ಅನುಮೋದನೆ ನೀಡಲಾಗಿದೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ.

ತರಬೇತಿಯ ಬಳಿಕ ನೀರಜ್, ಟರ್ಕಿಯಲ್ಲಿ ನಡೆಯಲಿರುವ ಪಾವೊ ನುರ್ಮಿ ಗೇಮ್ಸ್, ಕೋರ್ಟೆನ್ ಗೇಮ್ಸ್ ಮತ್ತು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು