ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಮಾತುಗಳನ್ನು ತಳ್ಳಿಹಾಕಿದ ಕುಸ್ತಿ‍: ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವೆ

Last Updated 6 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ‘ನನ್ನ ಕ್ರೀಡಾಜೀವನ ಮುಗಿದಿರಬಹುದೆಂದು ಜನರು ಭಾವಿಸಬಹುದು. ಆದರೆ ಅದರಿಂದ ನನ್ನ ಮೇಲೇನೂ ಪರಿಣಾಮವಾಗದು’ ಎಂದು ಅನುಭವಿ ಪೈಲ್ವಾನ್‌ ಸುಶೀಲ್‌ ಕುಮಾರ್‌ ಸ್ಪಷ್ಟ‍ಪಡಿಸಿದ್ದಾರೆ. ಆ ಮೂಲಕ ನಿವೃತ್ತಿ ಜೀವನದ ಬಗ್ಗೆ ಕೇಳಿಬಂದ ಮಾತುಗಳಿಗೆತೆರೆಯೆಳೆದಿದ್ದಾರೆ.

ಟೋಕಿಯೊ ಕ್ರೀಡೆಗಳು ಮುಂದಕ್ಕೆ ಹೋಗಿರುವುದರಿಂದ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವುದಕ್ಕೆ ತಮಗೆ ಅತ್ಯುತ್ತಮ ಅವ ಕಾಶ ಒದಗಿದೆ ಎಂದು ಮುಂದಿನ ತಿಂಗಳು 37 ವರ್ಷಕ್ಕೆ ಕಾಲಿಡಲಿರುವ ಈ ಕುಸ್ತಿಪಟು ಹೇಳಿದ್ದಾರೆ.

ಈ ವರ್ಷದ ಜುಲೈ 24ರಿಂದ ಆರಂಭವಾಗಬೇಕಾಗಿದ್ದ ಒಲಿಂಪಿಕ್ಸ್‌, ಸುಶೀಲ್‌, ಟೆನಿಸ್ ಆಟಗಾರ ಲಿಯಾಂಡರ್‌ ಪೇಸ್‌ ಅವರಿಗೆ ವಿದಾ ಯದ ವೇದಿಕೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಕ್ರೀಡೆಗಳು ಮುಂದಕ್ಕೆ ಹೋಗಿರುವುದರಿಂದ ಇವರ ಯೋಜನೆಗಳೂ ಬದಲಾಗಿವೆ.

‘ನಾನೀಗ ಎಲ್ಲೂ ಹೋಗುವುದಿಲ್ಲ. ಹೆಚ್ಚಿನ ಅವಧಿ ದೊರಕಿದೆ. ಉತ್ತಮ ರೀತಿಯ ತಯಾರಿಗೆ ಅನುಕೂಲವಾಗಿದೆ’ ಎಂದಿದ್ದಾರೆ. ಸುಶೀಲ್‌, ಎರಡು ಒಲಿಂಪಿಕ್‌ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT