ಮಂಗಳವಾರ, ಜುಲೈ 5, 2022
25 °C

ಎಟಿಪಿ ಕಪ್‌ಗೆ ನೊವಾಕ್ ಜೊಕೊವಿಚ್ ಅಲಭ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬಿಲ್‌ಗ್ರೇಡ್‌: ಮುಂದಿನ ತಿಂಗಳಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಗೂ ಮೊದಲು ನಡೆಯುವ ಎಟಿಪಿ ಕಪ್‌ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಪಾಲ್ಗೊಳ್ಳುವುದಿಲ್ಲ ಎಂದು ಅವರ ತಂಡ ಶನಿವಾರ ತಿಳಿಸಿದೆ.

‌’ಜೊಕೊವಿಚ್ ಅವರು ಬಿಲ್‌ಗ್ರೇಡ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎಟಿಪಿ ಕಪ್‌ ಟೂರ್ನಿಯಲ್ಲಿ ಆಡುವುದಿಲ್ಲ ಎಂಬುದು ಖಚಿತ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು. ಲಸಿಕೆ ಹಾಕಿಸಿಕೊಳ್ಳಲು ಮುಂದಾಗದ ಕಾರಣ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವುದು ಕೂಡ ಸಂದೇಹ.

ಸಿಡ್ನಿಯಲ್ಲಿ ನಡೆಯಲಿರುವ ಎಟಿಪಿ ಕಪ್ ಟೂರ್ನಿ ಮೂಲಕ ಪ್ರತಿ ವರ್ಷ ಪುರುಷರ ಟೆನಿಸ್ ಋತು ಆರಂಭವಾಗುತ್ತದೆ. 

ಜನವರಿ 17ರಿಂದ ಆಸ್ಟ್ರೇಲಿಯನ್ ಓಪನ್ ಟೂರ್ನಿ ನಡೆಯಲಿದ್ದು ಇದರಲ್ಲಿ ಚಾಂಪಿಯನ್ ಆದರೆ ಜೊಕೊವಿಚ್ ದಾಖಲೆಯ 21 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಂತಾಗುತ್ತದೆ. ಈ ಟೂರ್ನಿಯಲ್ಲಿ ಆಡಬೇಕಾದರೆ ಜೊಕೊವಿಚ್ ಮತ್ತು ತಂಡ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಅದಕ್ಕೆ ಜೊಕೊವಿಚ್‌ ನಿರಾಸಕ್ತಿ ತೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು