ಗುರುವಾರ , ಏಪ್ರಿಲ್ 9, 2020
19 °C
ಒಲಿಂಪಿಕ್‌ ಜ್ಯೋತಿ ಯಾತ್ರೆ

ನಿಯೋಗವಿಲ್ಲದೇ ತೆರಳಿದ ವಿಮಾನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಟೋಕಿಯೊ 2020 ಎಂಬ ವರ್ಣಮಯ ಬರಹ ಹೊಂದಿದ್ದ ವಿಮಾನವೊಂದು ಒಲಿಂಪಿಕ್‌ ಜ್ಯೋತಿ ಬುಧವಾರ ಸ್ವೀಕರಿಸಲು ಅಥೆನ್ಸ್‌ಗೆ ತೆರಳಿತು. ಆದರೆ, ಕೊರೊನಾ ಸೋಂಕು ಉಪಟಳದ ಕಾರಣ ಸಂಘಟಕರ ನಿಯೋಗ ಪ್ರಯಾಣ ಬೆಳೆಸಲಿಲ್ಲ.

ಉನ್ನತ ಮಟ್ಟದ ನಿಯೋಗ ಕಳುಹಿಸುವ ನಿರ್ಧಾರ ಕೈಬಿಡಲಾಯಿತು ಎಂದು ಟೋಕಿಯೊ 2020 ಸಂಘಟಕರು ತಿಳಿಸಿದ್ದಾರೆ. ಈ ನಿಯೋಗ ಸಂಘಟನಾ ಸಮಿತಿ ಅಧ್ಯಕ್ಷ ಯೊಶಿರೊ ಮೊರಿ ಮತ್ತು ಒಲಿಂಪಿಕ್ಸ್‌ ಸಚಿವೆ ಸೀಕೊ ಹಶಿಮೊಟೊ ಅವರನ್ನು ಒಳಗೊಳ್ಳಬೇಕಾಗಿತ್ತು. 

ಹಸ್ತಾಂತರ ಸಮಾರಂಭದಲ್ಲಿ ಗ್ರೀಸ್‌ನಲ್ಲಿರುವ ಜಪಾನ್‌ನ ರಾಯಭಾರಿಯು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕಳೆದ ವಾರವೇ ಗ್ರೀಸ್‌ಗೆ ಹೋಗಿರುವ 2020 ಒಲಿಂಪಿಕ್ಸ್‌ ಕೆಳಹಂತದ ಅಧಿಕಾರಿಗಳು ಜ್ಯೋತಿಯನ್ನು ಜಪಾನ್‌ಗೆ ತರುವಾಗ ಅದರ ಜೊತೆ ಪ್ರಯಾಣಿಸಲಿದ್ದಾರೆ.

ವಿಮಾನ ಹೊರಡುವಾಗಲೂ ಅಂಥ ಸಂಭ್ರಮ ಕಾಣಲಿಲ್ಲ. 20 ಮಂದಿ ವಿಮಾನನಿಲ್ದಾಣ ಸಿಬ್ಬಂದಿ ಹಾಜರಿದ್ದರು.‌ ಜಪಾನ್‌ನ ಮಾಟುಶಿಮಾ ವಾಯುನೆಲೆಯಲ್ಲಿ ಶುಕ್ರವಾರ ಜ್ಯೋತಿ ಹೊಂದಿರುವ ವಿಮಾನ ಇಳಿಯಲಿದೆ. ಅಲ್ಲಿಂದ ನಾಲ್ಕು ತಿಂಗಳ ಕಾಲ ಜಪಾನ್‌ನ ಎಲ್ಲೆಡೆ ಜ್ಯೋತಿಯಾತ್ರೆ ನಡೆಯಲಿದೆ. 26ರಂದು ಅಧಿಕೃತ ‘ಜ್ಯೋತಿ ಯಾತ್ರೆ’ ಈಶಾನ್ಯ ಭಾಗದ ಫುಕುಶಿಮಾದಿಂದ ನಡೆಯಲಿದೆ.

ಸೋಂಕು ಭಯದಿಂದ ಜ್ಯೋತಿ ಸಂಚರಿಸುವ ದಾರಿಯಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿರುವಂತೆ ಸಂಘಟಕರು ಕೋರಿದ್ದಾರೆ.   ಒಲಿಂಪಿಕ್ಸ್‌ಗೆ ಸಂಬಂಧಿಸಿ ಈ ಹಂತದಲ್ಲಿ ಯಾವುದೇ ಉಗ್ರ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಐಒಸಿ ಮಂಗಳವಾರ ತಿಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು