ಶುಕ್ರವಾರ, ಸೆಪ್ಟೆಂಬರ್ 17, 2021
21 °C

ಟೋಕಿಯೊ ಒಲಿಂಪಿಕ್ಸ್‌ನ ಅತಿ ಕಿರಿಯ ಸ್ಪರ್ಧಿಗೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅತಿ ಕಿರಿಯ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾಗಿರುವ ಸಿರಿಯಾದ 12 ವರ್ಷದ ಕ್ರೀಡಾಪಟು ಹೆಂಡ್ ಝಾಜಾ, ಟೇಬಲ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ತಮಗಿಂತಲೂ ಮೂರು ಪಟ್ಟು ಹೆಚ್ಚು ವಯಸ್ಸಿನ ಆಸ್ಟ್ರಿಯಾದ ಎದುರಾಳಿ 39 ವರ್ಷದ ಲಿಯೂ ಜಿಯಾ ವಿರುದ್ಧ ಹೋರಾಟಕ್ಕಿಳಿದಿದ್ದ ಹೆಂಡ್ ಝಾಜಾ 0-4ರ ಅಂತರದಲ್ಲಿ ಸೋಲನುಭವಿಸಿದರು.

ಇದನ್ನೂ ಓದಿ: 

ಆದರೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ತಮ್ಮ ಕನಸನ್ನು ಎದುರಾಳಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ಮೂಲಕ ಸ್ಮರಣೀಯವಾಗಿಸಿದ್ದಾರೆ.

ಸಿರಿಯಾದ ಹಮಾದಲ್ಲಿ ಜನಿಸಿದ ಝಾಜಾ, ಐದರ ಹರೆಯದಿಂದಲೇ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದ್ದರು.

ಯುದ್ಧಪೀಡಿತ ಸಿರಿಯಾದಲ್ಲಿ ಕ್ರೀಡೆಗೆ ಬೇಕಾದಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಈ ಎಲ್ಲದರ ನಡುವೆ ಝಾಜಾ ಭವಿಷ್ಯದ ತಾರೆಯಾಗುವ ಕನಸು ಕಟ್ಟಿಕೊಂಡಿದ್ದಾರೆ.

ಕಳೆದ ವರ್ಷ ಜೋರ್ಡಾನ್‌ನಲ್ಲಿ ನಡೆದ ಪಶ್ಚಿಮ ಏಷ್ಯಾ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಝಾಜಾ 1992ರ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತಿ ಕಿರಿಯ ಕ್ರೀಡಾಪಟು ಆಗಿದ್ದಾರೆ. ಅಂದು ರೋಯಿಂಗ್ ವಿಭಾಗದಲ್ಲಿ ಸ್ಪೇನ್‌ನ ಕಾರ್ಲೊಸ್ ಫ್ರಂಟ್ ತಮ್ಮ 11ರ ಹರೆಯದಲ್ಲಿ ಸ್ಪರ್ಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು