ಮಂಗಳವಾರ, ಸೆಪ್ಟೆಂಬರ್ 28, 2021
25 °C

ಒಲಿಂಪಿಕ್ಸ್‌ ಪದಕ ‘ಒಂದೇ ಲಕ್ಷ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇರುವ ಕ್ರೀಡಾಪಟುಗಳ ನೆರವಿಗಾಗಿ ‘ಒಂದು ಕನಸು, ಒಂದೇ ಲಕ್ಷ್ಯ’ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಐದು ಕ್ರೀಡೆಗಳಲ್ಲಿ ಹೆಸರು ಮಾಡಿರುವ ಏಳು ಮಂದಿ ಯುವ ಅಥ್ಲೀಟ್‌ಗಳಿಗೆ ಇದರಡಿ ವಿಶೇಷ ತರಬೇತಿ ಸಿಗಲಿದೆ. ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ ವಿಜೇತ ಲಕ್ಷ್ಯ ಸಂಸ್ಥೆಯ ಈ ಯೋಜನೆಗೆ ಡ್ರೀಮ್ ಸ್ಪೋರ್ಟ್ಸ್ ಫೌಂಡೇಷನ್ (ಡಿಎಸ್‌ಎಫ್‌) ಕೈಜೋಡಿಸಿದೆ.  

ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಸುಂದರ್ ಅಯ್ಯರ್ ಮತ್ತು ಡ್ರೀಮ್ ಸ್ಪೋರ್ಟ್ಸ್‌ನ ಮುಖ್ಯ ಯೋಜನಾ ಅಧಿಕಾರಿ ಕಿರಣ್ ವಿವೇಕಾನಂದ ಅವರ ಸಮಕ್ಷಮದಲ್ಲಿ ಉದ್ಘಾಟನೆಗೊಂಡಿತು. ಶೂಟಿಂಗ್‌, ಬಾಕ್ಸಿಂಗ್‌, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು