ಶನಿವಾರ, ಜುಲೈ 31, 2021
25 °C

ಹಾಕಿ ಕೋಚ್‌ಗಳಿಗೆ ಆನ್‌ಲೈನ್‌ ಶಿಕ್ಷಣ ಕಾರ್ಯಾಗಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ಆಯಾಮಗಳಲ್ಲಿ ತಾಂತ್ರಿಕ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಹಾಕಿ ಇಂಡಿಯಾದ (ಎಚ್‌ಐ) ಕೋಚ್‌ಗಳು ಹಾಗೂ ತಾಂತ್ರಿಕ ಅಧಿಕಾರಿಗಳಿಗೆ ಆನ್‌ಲೈನ್‌ ಶಿಕ್ಷಣ ಕಾರ್ಯಾಗಾರಗಳನ್ನು ಏಷ್ಯನ್‌ ಹಾಕಿ ಫೆಡರೇಷನ್ (ಎಎಚ್‌ಎಫ್‌) ಹಮ್ಮಿಕೊಳ್ಳಲಿದೆ.

ಕೋಚ್‌ಗಳು, ತಾಂತ್ರಿಕ ಅಧಿಕಾರಿಗಳು, ಅಂಪೈರ್‌ಗಳಿಗೆ ಶನಿವಾರದಿಂದ ಇದೇ 19ರವರೆಗೆ ಒಟ್ಟು 10 ಕಾರ್ಯಾಗಾರಗಳನ್ನು ಎಎಚ್‌ಎಫ್‌ ನಡೆಸಲಿದೆ.

‘ಎಎಚ್‌ಎಫ್‌ ಜೂನ್‌ನಲ್ಲಿ ಏಷ್ಯಾದ ಬೇರೆ ಬೇರೆ ತಂಡಗಳಿಗೆ ಆನ್‌ಲೈನ್‌ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು. ಇದೇ ರೀತಿಯ ಕಾರ್ಯಾಗಾರಗಳನ್ನು ನಡೆಸಿಕೊಂಡುವಂತೆ ಎಎಚ್‌ಎಫ್‌ಗೆ ನಾವೂ ಮನವಿ ಮಾಡಿಕೊಂಡಿದ್ದೇವೆ’ ಎಂದು ಎಚ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

‘ಹಾಕಿ ಇಂಡಿಯಾ ಹೋದ ತಿಂಗಳು ಪ್ರತಿ ಎಂಟು ಕಾರ್ಯಾಗಾರಗಳಿಗೆ ಗರಿಷ್ಠ ಆರು ಅಭ್ಯರ್ಥಿಗಳನ್ನು ಹೆಸರಿಸಿತ್ತು. ಈ ತಿಂಗಳು ಎಎಎಚ್‌ಎಫ್‌ನ ಪ್ರತಿ ಕಾರ್ಯಾಗಾರಗಳಲ್ಲಿ 25ಕ್ಕಿಂತ ಹೆಚ್ಚು ಕೋಚ್‌ಗಳು ಹಾಗೂ 15 ಮಂದಿ ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಟೂರ್ನಿಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ಅಂಶಗಳ ಬಗ್ಗೆ ತಾಂತ್ರಿಕ ಪರಿಣತಿ ಮತ್ತು ಜ್ಞಾನವನ್ನು ನೀಡುವ ಉದ್ದೇಶದಿಂದ,  ಮೈಕ್ರೋಸಾಫ್ಟ್ ತಂಡಗಳ ಅಪ್ಲಿಕೇಶನ್‌ ಮೂಲಕ ಈ ಆನ್‌ಲೈನ್ ಶಿಕ್ಷಣ ಕಾರ್ಯಾಗಾರಗಳನ್ನು ಉಚಿತವಾಗಿ ನಡೆಸಲಾಗುತ್ತದೆ.

ಪ್ರತೀ ಕಾರ್ಯಾಗಾರವು ಮೂರರಿಂದ ನಾಲ್ಕು ತಾಸಿನದ್ದಾಗಿರುತ್ತದೆ. ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು