ಭಾನುವಾರ, ಏಪ್ರಿಲ್ 11, 2021
27 °C

ಒಲಿಂಪಿಕ್ಸ್‌: ವಿದೇಶಿ ಪ್ರೇಕ್ಷಕರಿಗಿಲ್ಲ ಪ್ರವೇಶಾವಕಾಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ಗೆ ವಿದೇಶದ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂಬುದನ್ನು ಆಯೋಜನಾ ಸಮಿತಿಯವರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಕೋವಿಡ್‌–19 ಹರಡುವುದನ್ನು ತಡೆಯಲು ಮತ್ತು ಕ್ರೀಡಾಕೂಟದಿಂದ ಯಾವುದೇ ಅಪಾಯ ಇಲ್ಲ ಎಂದು ಜಪಾನ್ ಪ್ರಜೆಗಳಿಗೆ ಮನದಟ್ಟು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. 

ಕಳೆದ ವರ್ಷ ನಡೆಯಬೇಕಾಗಿದ್ದ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲಾಗಿದೆ. ಜುಲೈ 23 ರಿಂದ ಆಗಸ್ಟ್ 8ರ ವರೆಗೂ ಒಲಿಂಪಿಕ್ಸ್  ನಡೆಯಲಿದೆ. ವಿದೇಶಿ ಪ್ರೇಕ್ಷಕರಿಲ್ಲದ ಮೊತ್ತಮೊದಲ ಒಲಿಂಪಿಕ್ಸ್ ಆಗಿರಲಿದೆ ಇದು. 

ಸ್ಥಳೀಯ ಆಯೋಜಕರು, ಜಪಾನ್ ಅಧಿಕಾರಿಗಳು, ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಮುಖ್ಯಸ್ಥರು ಮತ್ತು ಕ್ರೀಡಾಕೂಟದ ಅಧಿಕಾರಿಗಳು ಶನಿವಾರ ಸಭೆ ಸೇರಿ ಚರ್ಚೆ ನಡೆಸಿದ ನಂತರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಜಪಾನ್‌ನಲ್ಲೂ ವಿದೇಶಗಳಲ್ಲೂ ವೈರಸ್ ಹಾವಳಿ ನಿಯಂತ್ರಣ ಸವಾಲಾಗಿದೆ. ಆದ್ದರಿಂದ ಇಂಥ ನಿರ್ಧಾರ ಅನಿವಾರ್ಯವಾಯಿತು’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು