ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಚಿನ್ನದ ಪದಕದತ್ತ ಸಿಂಧು ನೋಟ

Last Updated 24 ಆಗಸ್ಟ್ 2019, 16:15 IST
ಅಕ್ಷರ ಗಾತ್ರ

ಬಾಸೆಲ್‌, ಸ್ವಿಟ್ಜರ್ಲೆಂಡ್‌: ಭಾರತದ ಪಿ.ವಿ. ಸಿಂಧು ಅವರಿಗೆ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಚಿನ್ನಕ್ಕೆ ಮುತ್ತಿಡಲು ಇನ್ನೊಂದೆ ಮೆಟ್ಟಿಲು ಅಂತರ. ಶನಿವಾರ ಸೆಮಿಫೈನಲ್‌ ಪಂದ್ಯದಲ್ಲಿಅವರು ಚೀನಾದ ಚೆನ್‌ ಯು ಫೆ ಅವರನ್ನು ಸುಲಭವಾಗಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು.

ಸಿಂಧು ಅವರು21–7, 21–14 ಗೇಮ್‌ಗಳಿಂದ ಆಲ್‌ ಇಂಗ್ಲೆಂಡ್‌ ಟೂರ್ನಿಯ ಚಾಂಪಿಯನ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಯು ಫೆ ವಿರುದ್ಧ ಗೆದ್ದರು. ಕೇವಲ 40 ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಯಿತು. ಹೋದ ಎರಡು ಆವೃತ್ತಿಗಳಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಸಿಂಧು ಅವರಿಗೆ ಇಲ್ಲಿ ಚಿನ್ನ ಗೆಲ್ಲುವ ಉತ್ತಮ ಅವಕಾಶವಿದೆ.

24 ವರ್ಷದ ಹೈದರಾಬಾದ್‌ ಆಟಗಾರ್ತಿ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಥಾಯ್ಲೆಂಡ್‌ನ ರಚನೊಕ್‌ ಇಂತನಾನ್ ಅಥವಾ ಜಪಾನ್‌ನ ನೊಜೊಮಿ ಒಕುಹಾರ ಅವರನ್ನು ಎದುರಿಸುವರು.

ಯು ಫೆ ವಿರುದ್ಧ 5–3ರಿಂದ ಗೆಲುವಿನ ದಾಖಲೆ ಹೊಂದಿರುವ ಸಿಂಧು, ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಶಕ್ತಿಯುತ ರಿಟರ್ನ್ಸ್‌ ಮೂಲಕ ಚೆನ್‌ ಎದುರಾಳಿಯನ್ನು ಕಂಗೆಡಿಸಿದರು. 11–3 ಮುನ್ನಡೆಯೊಂದಿಗೆ ಸಿಂಧು ವಿರಾಮಕ್ಕೆ ತೆರಳಿದರು.

ಚೆನ್‌ ಅವರ ಕಳಪೆ ರಿಟರ್ನ್‌, ಸಿಂಧು ಅವರ ಪಾಯಿಂಟ್‌ಗಳನ್ನು 14ಕ್ಕೆ ಏರಿಸಿತು. ಗೇಮ್‌ ಸುಲಭವಾಗಿ ಭಾರತದ ಆಟಗಾರ್ತಿಯ ವಶವಾಯಿತು.

ಎರಡನೇ ಗೇಮ್‌ ರಂಗೇರಿತು. 3–3ರ ಸಮಬಲದಲ್ಲಿ ಸಾಗಿದ್ದ ಗೇಮ್‌ನಲ್ಲಿ ಚೆನ್‌ ಎಸಗಿದ ಹಲವು ತಪ್ಪುಗಳು ಸಿಂಧು ಮುನ್ನಡೆಯನ್ನು 10–6ಕ್ಕೆ ತಲುಪಿಸಿದವು. ವಿರಾಮದ ವೇಳೆ ಇದು 11–7 ಆಗಿತ್ತು. ಚೆನ್‌ ಅವರ ಅನಗತ್ಯ ತಪ್ಪುಗಳು ಮರುಕಳಿಸಿದವು. ಸಿಂಧು ಅವರ ಬಲಯುತ, ಶ್ರಮದ ರ‍್ಯಾಲಿಗಳಿಗೆ ಫಲ ಸಿಕ್ಕಿತು. 17–9ಕ್ಕೆ ಮುನ್ನಡೆ ಹೆಚ್ಚಿಸಿಕೊಂಡ ಭಾರತದ ಆಟಗಾರ್ತಿ ಆ ಬಳಿಕ ಹಿಂದಿರುಗಿ ನೋಡಲಿಲ್ಲ. ಪಂದ್ಯ ಗೆದ್ದು ಸಂಭ್ರಮದ ಅಲೆಯಲ್ಲಿ ತೇಲಿದರು.

ಪ್ರಣೀತ್‌ಗೆ ಕಂಚು
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಬಿ.ಸಾಯಿ ಪ್ರಣೀತ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಹಾಲಿ ಚಾಂಪಿಯನ್‌ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೋತರು.

ಪ್ರಣೀತ್‌ ಅವರ ಆಕ್ರಮಣಕಾರಿ ಆಟಕ್ಕೆ ಮೊಮೊಟಾ ರಕ್ಷಣಾ ಕೋಟೆಯನ್ನು ಭೇದಿಸಲಾಗಲಿಲ್ಲ. ವಿಶ್ವದ ಮೊದಲ ರ‍್ಯಾಂಕಿನ ಆಟಗಾರನ ಎದುರು ಪ್ರಣೀತ್‌ 13–21, 8–21 ಗೇಮ್‌ಗಳಿಂದ ಮಣಿದರು.

ಸೋತರೂ ಅಪರೂಪದ ಸಾಧನೆಯೊಂದಕ್ಕೆ ಪ್ರಣೀತ್‌ ಭಾಜನರಾದರು. 36 ವರ್ಷಗಳ ಬಳಿಕ ಪ್ರತಿಷ್ಠಿತ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಆಟಗಾರ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT