ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪ್ಯಾರಾ ಶೂಟಿಂಗ್‌ ಸಂಸ್ಥೆ ಅಸ್ತಿತ್ವಕ್ಕೆ

ಅಂಗವಿಕಲರ ಕ್ರೀಡಾಸಂಸ್ಥೆಯಲ್ಲಿ ಸೇರ್ಪಡೆ: ರೈಫಲ್‌ ಸಂಸ್ಥೆಯಿಂದ ದೂರ
Last Updated 5 ಸೆಪ್ಟೆಂಬರ್ 2021, 22:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಗವಿಕಲರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದಲ್ಲಿ ಕರ್ನಾಟಕ ಶೂಟಿಂಗ್‌ ಪ್ಯಾರಾ ಸ್ಪೋರ್ಟ್ಸ್‌ ಸಂಸ್ಥೆಯನ್ನು ಅಸ್ವಿತ್ವಕ್ಕೆ ತರಲಾಗಿದೆ. ಇದು ರಾಜ್ಯದ ಶೂಟಿಂಗ್‌ ಕ್ರೀಡೆಯಲ್ಲಿ ಹೊಸ ಅಲೆ ಎಬ್ಬಿಸುವ ನಿರೀಕ್ಷೆ ಗರಿಗೆದರಿದೆ.

ಮೊದಲು ಕರ್ನಾಟಕ ರಾಜ್ಯ ರೈಫಲ್‌ ಸಂಸ್ಥೆ ಅಡಿಯಲ್ಲಿ ಪ್ಯಾರಾ ಶೂಟರ್‌ಗಳು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ರೈಫಲ್‌ ಸಂಸ್ಥೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಸಂಸ್ಥೆ ಆರಂಭಿಸಲಾಗಿದ್ದು, ಕರ್ನಾಟಕ ರಾಜ್ಯ ಅಂಗವಿಲಕರ ಕ್ರೀಡಾ ಸಂಸ್ಥೆ ಅಧೀನದಲ್ಲಿ ಕಾರ್ಯನಿರ್ವ ಹಿಸಲಿದೆ. ಸಂಸ್ಥೆಯನ್ನು ನೋಂದಾಯಿಸಲಾಗಿದ್ದು, ಹುಬ್ಬಳ್ಳಿಯಲ್ಲಿ ಕಚೇರಿಯಿದೆ.

ಹಂತಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಂಸ್ಥೆಯ ಘಟಕಗಳನ್ನು ಆರಂಭಿಸಿ, ಪದಾಧಿಕಾರಿಗಳನ್ನು ನೇಮಿಸಿ ನಿರಂತರವಾಗಿ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಲು ರಾಜ್ಯ ಸಂಸ್ಥೆ ನಿರ್ಧರಿಸಿದೆ.

ಅಂತರರಾಷ್ಟ್ರೀಯ ಶೂಟರ್‌ ಹಾಗೂ ಒಲಿಂಪಿಯನ್‌ ಬೆಂಗಳೂರಿನ ಪಿ.ಎನ್‌. ಪ್ರಕಾಶ್ ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿ (ಎಚ್‌ಎಸ್‌ಸಿಎ) ಮುಖ್ಯಸ್ಥ, ಶೂಟರ್‌ ರವಿಚಂದ್ರ ಬಾಲೆ ಹೊಸೂರ ಕಾರ್ಯದರ್ಶಿಯಾಗಿದ್ದಾರೆ.‌ ಹೊಸ ಸಂಸ್ಥೆ ಸೆ.12ರಂದು ಹುಬ್ಬ
ಳ್ಳಿಯಲ್ಲಿ ರಾಜ್ಯಮಟ್ಟದ ಮೊದಲ ಪ್ಯಾರಾ ಶೂಟಿಂಗ್‌ ಟೂರ್ನಿ ಆಯೋಜಿಸಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಸ್ವರೂಪ್‌ ಉನಲಕರ್‌ ಇಲ್ಲಿನ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. 10 ಮೀ. ಏರ್‌ ರೈಫಲ್‌, ಪಿಸ್ತೂಲ್‌, ಪುರುಷರ ಹಾಗೂ ಮಹಿಳೆಯರ 177 ಓಪನ್‌ ಸೈಟ್‌ ರೈಫಲ್‌ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ಜರುಗಲಿವೆ.

‘ಕರ್ನಾಟಕದಲ್ಲಿ ಸಾಕಷ್ಟು ಅಂಗ ವಿಕಲ ಶೂಟರ್‌ಗಳಿದ್ದರೂ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಸಿಗುತ್ತಿಲ್ಲ. ನೀವೂ ಸಾಧಿಸಬಲ್ಲಿರಿ ಎನ್ನುವ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬುವ ಕೆಲಸ ಮಾಡಬೇಕಾಗಿದೆ. ಟೋಕಿಯೊ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ನೋಡಿ ನಾವೂ ಅವರಂತೆ ಸಾಧನೆ ಮಾಡಬೇಕೆಂದು ಬಹಳಷ್ಟು ಪ್ಯಾರಾ ಶೂಟರ್‌ಗಳು ಹಾತೊರೆಯುತ್ತಿದ್ದಾರೆ. ಅವರಿಗೆ ವೇದಿಕೆ ಒದಗಿಸಲು ಸಂಸ್ಥೆ ಹುಟ್ಟುಹಾಕಿದ್ದೇವೆ. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರಿಗೆ ಸ್ಫೂರ್ತಿ ತುಂಬುತ್ತೇವೆ’ ಎಂದು ರವಿಚಂದ್ರ ಬಾಲೆಹೊಸೂರ ಹೇಳಿದರು.

ಸೆ.12ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಟೂರ್ನಿ

ಪ್ಯಾರಾ ಶೂಟಿಂಗ್‌ ಸ್ಪರ್ಧೆಗೆ ಸ್ವರೂಪ್‌ ಉನಲಕರ್‌

ಜಿಲ್ಲಾ ಮಟ್ಟದಲ್ಲಿ ಸಂಸ್ಥೆಯ ಘಟಕ ಆರಂಭಕ್ಕೆ ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT