ಶುಕ್ರವಾರ, ಏಪ್ರಿಲ್ 23, 2021
22 °C

ಕೋವಿಡ್-19‌: ಪ್ಯಾರಿಸ್‌ ಮ್ಯಾರಥಾನ್ ರದ್ದು

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಈ ಬಾರಿಯ ಪ್ಯಾರಿಸ್‌ ಮ್ಯಾರಥಾನ್‌ಅನ್ನು ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಮ್ಯಾರಥಾನ್‌ನ ಸಂಘಟಕರು ಬುಧವಾರ ಈ ವಿಷಯ ತಿಳಿಸಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಟೂರ್ನಿಯನ್ನು ಅಕ್ಟೋಬರ್‌ಗೆ ಮುಂದೂಡಲಾಗಿತ್ತು. 

‘ರೇಸ್‌ಅನ್ನು ಇತ್ತೀಚೆಗೆ ನವೆಂಬರ್‌ನಲ್ಲಿ ಮರುನಿಗದಿ ಮಾಡಲು ಪ್ರಯತ್ನಿಸಿದ್ದೆವು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಇರುವ ಪ್ರಯಾಣ ನಿರ್ಬಂಧಗಳಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಸಂಘಟಕರು ತಿಳಿಸಿದ್ದಾರೆ.

‘ಹಲವು ಸ್ಪರ್ಧಿಗಳು ಅದರಲ್ಲೂ ವಿದೇಶಗಳಿಂದ ಬರುವವರು, ನವೆಂಬರ್ 14–15ರಂದು ನಡೆಯುವ ಟೂರ್ನಿಗೆ ಆಗಮಿಸಲು ಪ್ರಯಾಣ ನಿರ್ಬಂಧದ ತೊಂದರೆ ಎದುರಿಸುತ್ತಿದ್ದಾರೆ. ಹಾಗಾಗಿ ಈ ವರ್ಷದ ಮ್ಯಾರಥಾನ್ ರದ್ದು ಮಾಡುವುದು ಉತ್ತಮ ನಿರ್ಧಾರ ಎನಿಸುತ್ತದೆ‘ ಎಂದು ಟೂರ್ನಿಯ ಸಂಘಟಕರು ಹೇಳಿದ್ದಾರೆ.

ಸಂಘಟಕರು ಇನ್ನು 2021ರ ಆವೃತ್ತಿಯತ್ತ ಗಮನಹರಿಸಲಿದ್ದಾರೆ. ಈ ವರ್ಷದ ಮ್ಯಾರಥಾನ್‌ಗೆ ನೋಂದಾಯಿಸಿಕೊಂಡ ಅಥ್ಲೀಟ್‌ಗಳು ಮುಂದಿನ ವರ್ಷಕ್ಕೂ ಸ್ವಯಂ ಅರ್ಹತೆ ಪಡೆಯುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು