ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ, ಮಾನಸಿಕ ಸ್ಥಿರತೆಗೆ ವೃಕ್ಷಾಸನ

Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ವೃಕ್ಷಾಸನ ಟ್ರೀ ಪೋಸ್ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ವೃಕ್ಷ ಎಂದರೆ ಮರ ಎಂದರ್ಥ. ಈ ಆಸನದಲ್ಲಿ ದೇಹವು ಸ್ಥಿರವಾಗಿ ಕಾಣುತ್ತದೆ. ಸಮತೋಲಿತ ಮತ್ತು ಮರದಂತೆ ಆಕರ್ಷಕವಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಜಗತ್ತಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ದೈಹಿಕ ಮತ್ತು ಮಾನಸಿಕ ಸ್ಥಿರತೆ ಒಂದು ಸಂಪೂರ್ಣ ಅವಶ್ಯಕತೆಯಾಗಿದೆ.

ಸಮತೋಲವನ್ನು ಸುಧಾರಿಸಲು ಗಮನಾರ್ಹ ಆಸನ. ಈ ಆಸನವು ಮರದ ಬೇರುಗಳಾಗಿ ನಿಮ್ಮ ಕಾಲು ಚಾರ್ಜ್ ಆಗುತ್ತದೆ. ಇದು ಆಳವಾಗಿ ಬೇರೂರಿಸುವ ಮರದ ಸಾರವನ್ನೂ ಸುತ್ತುವರಿಯುತ್ತದೆ. ಅದು ಶಕ್ತಿ ಮತ್ತು ಸ್ಥಿರತೆ ಸೂಚಿಸುತ್ತದೆ. ಈ ಭಂಗಿಯನ್ನು ಅಭ್ಯಾಸ ಮಾಡುವಾಗ, ಸಂಪೂರ್ಣ ದೇಹದ ತೂಕವನ್ನೂ ಒಂದು ಕಾಲಿಗೆ ಇಡಲಾಗುತ್ತದೆ. ನಿರ್ದಿಷ್ಟ ಕಾಲು ಬಲಪಡಿಸುತ್ತದೆ. ಇದೊಂದು ಹಲವು ಆಸನಗಳ ಮೂಲವಾಗಿದೆ. ಈ ಆಸನ ಅಭ್ಯಾಸವಾದರೆ ಮುಂದಿನ ಯೋಗಾಸನಗಳನ್ನು ಕಲಿಯಲು ಸುಲಭ.
ಅಭ್ಯಾಸ ಕ್ರಮ: ತಾಡಾಸನದಲ್ಲಿ (ಸ್ಥಿತಿ) ನಿಲ್ಲಬೇಕು. ಬರಗಾಲ ಮಂಡಿ ಬಗ್ಗಿಸಿ ಎಡತೊಡೆಯ ಮೂಲೆಗೆ ಸೇರಿಸಿ. ಅನಂತರ ಎರಡು ಕೈಗಳನ್ನು ನೇರವಾಗಿ ತಲೆ ಮೇಲೆ ಎತ್ತಿ ಹಿಡಿದು ಅಂಗೈಗಳನ್ನು ಜೋಡಿಸಿ. ಅನಂತರ ಉಸಿರನ್ನು ಒಳಕ್ಕೆಳೆದು ಸ್ವಲ್ಪ ಹೊತ್ತು ನಿಲ್ಲಿರಿ. ಒಂದೇ ಕಾಲಿನ ಮೇಲೆ ಶರೀರದ ಭಾರ ಹಾಕಿ, ಸಮತೋಲನ ತಪ್ಪದಂತೆ ಜಾಗೃತೆ ವಹಿಸಿ ಸಮತೋಲನ ಸುಧಾರಿಸಲು ನಿಂತ ಕಾಲಿನ ಹೆಬ್ಬೆರಳಿನ ಹಿಂಭಾಗವನ್ನು ನೆಲಕ್ಕೆ ಒತ್ತಿ. ಆರಂಭದಲ್ಲಿ ಈ ಆಸನ ತುಸು ಕಷ್ಟವಾಗಬಹುದು. ಆನಂತರ ಸರಳ, ಸುಲಭವಾಗುತ್ತದೆ. ಹಾಗೆಯೇ ಇನ್ನೊಂದು ಬದಿಯಿಂದ ಎಡಗಾಲಿನ ಮಂಡಿ ಬಗ್ಗಿಸಿ ಮೇಲೆ ತಿಳಿಸಿದಂತೆ ಮಾಡಿ.

ಉಪಯೋಗ

ದೇಹದ ಸಮತೋಲ ವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಅತ್ಯುತ್ತಮವಾದ ಭಂಗಿಯನ್ನು ನೀಡುತ್ತದೆ. ಕಾಲುಗಳು, ತೊಡೆಗಳು ಬೆನ್ನು, ಭುಜಗಳು ಮತ್ತು ತೋಳುಗಳನ್ನು ಬಲಪಡಿಸುತ್ತದೆ. ಮನಸ್ಸು ಮತ್ತು ದೇಹದ ಸ್ಥಿರತೆಯನ್ನು ನೀಡುತ್ತದೆ. ಪಾದಗಳಲ್ಲಿ ಅಸ್ಥಿರಜ್ಜುಗಳನ್ನು ಬಲಪಡಿಸಬಹುದು. ಏಕಾಗ್ರತೆಯನ್ನು ಹೆಚ್ಚು ಸುಧಾರಿಸುತ್ತದೆ.ಕೀಲುಗಳ ಸಂಧಿವಾತದ ಸಮಸ್ಯೆ ನಿವಾರಣೆಗೆ ಸಹಕಾರಿ. ತಾಳ್ಮೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಎರಡು ಕೈ ಶಿರಸ್ಸಿನ ಮೇಲೆ ತರುವಾಗ ತೋಳುಗಳು ಕಿವಿಗೆ ಒತ್ತಿರಬೇಕು. ಇದರಿಂದ ತೋಳುಗಳ ನರಗಳು, ಮೊಣಕೈಗಳು ಬಲಗೊಳ್ಳುತ್ತದೆ.

ಆರಂಭದಲ್ಲಿ ಕಷ್ಟವಾಗುವವರು ಗೋಡೆಯ ಆಧಾರದಲ್ಲಿ ಅಭ್ಯಾಸ ಮಾಡಬಹುದು. ಕಾಲುಗಳ ಸದೃಢತೆಗೆ ಈ ಆಸನ ಸಹಕಾರಿ. 40 ವರ್ಷ ಮೇಲ್ಟಟ್ಟವರು ಗೋಡೆ ಆಧಾರದಲ್ಲಿ ಅಭ್ಯಾಸ ಮಾಡಬಹುದು.

ವಿ.ಸೂ: ವರ್ಟಿಗೋ, ಅಧಿಕ ರಕ್ತದೊತ್ತಡ, ಮಂಡಿ ನೋವು ಇದ್ದವರು ಈ ಆಸನ ಅಭ್ಯಾಸ ಬೇಡ. ಮೈಗ್ರೇನ್ ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಈ ಆಸನವನ್ನು ತಪ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT