ಸೋಮವಾರ, ಆಗಸ್ಟ್ 26, 2019
21 °C
ಪೋಲೆಂಡ್‌ ಓಪನ್‌ ಕುಸ್ತಿ ಟೂರ್ನಿ

ವಿನೇಶಾಗೆ ಚಿನ್ನ

Published:
Updated:
Prajavani

ನವದೆಹಲಿ (ಪಿಟಿಐ): ಭಾರತದ ವಿನೇಶಾ ಪೋಗಟ್‌ ಅವರು ಪೋಲೆಂಡ್‌ ಓಪನ್‌ ಕುಸ್ತಿ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 53 ಕೆಜಿ ವಿಭಾಗದಲ್ಲಿ ಅವರು ಗೆದ್ದ ಸತತ ಮೂರನೇ ಚಿನ್ನ ಇದು.

ವಾರ್ಸಾದಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವಿನೇಶಾ ಅವರು ಸ್ಥಳೀಯ ಪಟು ರೊಕ್ಸಾನಾ ಅವರನ್ನು 3–2ರಿಂದ ಚಿತ್‌ ಮಾಡಿದರು.

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ರಿಯೊ ಒಲಿಂಪಿಕ್ಸ್ ಕಂಚು ವಿಜೇತ ಸ್ವೀಡನ್‌ನ ಸೋಫಿಯಾ ಮ್ಯಾಟ್‌ಸನ್‌ ವಿರುದ್ಧ 24 ವರ್ಷದ ವಿನೇಶಾ ಜಯದ ನಗೆ ಬೀರಿದ್ದರು.

 

Post Comments (+)