ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್, ಮಹಾರಾಷ್ಟ್ರ ತಂಡಗಳಿಗೆ ಗೆಲುವು

ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿ
Last Updated 28 ಸೆಪ್ಟೆಂಬರ್ 2022, 12:56 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್ ಮತ್ತು ಮಹಾರಾಷ್ಟ್ರ ತಂಡಗಳು ಅಖಿಲ ಭಾರತ ಪೋಸ್ಟಲ್ (ಅಂಚೆ ಇಲಾಖೆ) ವಾಲಿಬಾಲ್ ಟೂರ್ನಿಯಲ್ಲಿ ಬುಧವಾರ ಜಯಭೇರಿ ಮೊಳಗಿಸಿದವು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನ ಲೀಗ್ ಹಂತದಲ್ಲಿ ಗುಜರಾತ್ ತಂಡವು25–21, 25–12, 25–19ರಿಂದ ತೆಲಂಗಾಣ ತಂಡಕ್ಕೆ ಸೋಲುಣಿಸಿತು. ಮೊದಲ ಗೇಮ್‌ನಲ್ಲಿ ತೆಲಂಗಾಣ ಸ್ವಲ್ಪ ಪೈಪೋಟಿ ನೀಡಿತು. ಆದರೆ ಎರಡನೇ ಗೇಮ್‌ನಲ್ಲಿ ಗುಜರಾತ್‌ ಸಂಪೂರ್ಣ ಮೇಲುಗೈ ಸಾಧಿಸಿತು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ತೆಲಂಗಾಣ ಉತ್ತಮ ಆಟವಾಡಿದರೂ ಎದುರಾಳಿ ತಂಡದ ಗೆಲುವು ತಡೆಯಲಾಗಲಿಲ್ಲ.

ಇನ್ನೊಂದು ಪಂದ್ಯದಲ್ಲಿ ಮಹಾರಾಷ್ಟ್ರ25–18, 25–13, 25–22ರಿಂದ ಮಧ್ಯಪ್ರದೇಶ ತಂಡಕ್ಕೆ ಸೋಲುಣಿಸಿತು. ಲೀಗ್ ಹಂತದ ಇನ್ನುಳಿದ ಹಣಾಹಣಿಗಳಲ್ಲಿ ಹಿಮಾಚಲ ಪ್ರದೇಶ 25–7, 25–14, 25–20ರಿಂದ ಹರಿಯಾಣ ಎದುರು, ತಮಿಳುನಾಡು 25–17, 25–15, 18–25, 25–16ರಿಂದ ಉತ್ತರ ಪ್ರದೇಶ ವಿರುದ್ಧ, ಪಶ್ಚಿಮ ಬಂಗಾಳ 25–21, 25–21, 25–22ರಿಂದ ಒಡಿಶಾ ಎದುರು ಜಯ ಸಾಧಿಸಿದವು.

ಕರ್ನಾಟಕಕ್ಕೆ ಎರಡನೇ ಜಯ: ಆತಿಥೇಯ ಕರ್ನಾಟಕ ತಂಡವು ಲೀಗ್ ಹಂತದಲ್ಲಿ ಎರಡನೇ ಜಯ ಗಳಿಸಿತು. ಮಂಗಳವಾರ ಸಂಜೆ ನಡೆದ ಪಂದ್ಯದಲ್ಲಿ 3–0ಯಿಂದ ದೆಹಲಿ ತಂಡಕ್ಕೆ ಸೋಲುಣಿಸಿತು. ಮೊದಲ ಪಂದ್ಯದಲ್ಲಿ ರಾಜ್ಯ ತಂಡ ಪಂಜಾಬ್‌ಅನ್ನು ಮಣಿಸಿ ಶುಭಾರಂಭ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT