ಬೆಂಗಳೂರು: ಭರ್ಜರಿ ಆಟವಾಡಿದ ಕರ್ನಾಟಕ ವೃತ್ತ ತಂಡದವರು ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ 25–9, 25–9, 25–6ರಿಂದ ಪಂಜಾಬ್ ತಂಡವನ್ನು ಪರಾಭವಗೊಳಿಸಿತು. 45 ನಿಮಿಷಗಳ ಈ ಹಣಾಹಣಿಯಲ್ಲಿ ಆತಿಥೇಯ ಆಟಗಾರರು ಸಂಪೂರ್ಣ ಪಾರಮ್ಯ ಮೆರೆದರು.
ಇನ್ನುಳಿದ ಪಂದ್ಯಗಳಲ್ಲಿ ಹಿಮಾಚಲ ಪ್ರದೇಶ25-17, 25-16,25-19ರಿಂದ ಮಹಾರಾಷ್ಟ್ರ ಎದುರು, ಪಶ್ಚಿಮ ಬಂಗಾಳ25-16, 23-25, 25-19, 25-10ರಿಂದ ಗುಜರಾತ್ ಎದುರು, ರಾಜಸ್ಥಾನ21-25, 25-20, 25-20, 25-19ರಿಂದ ಆಂಧ್ರ ತಂಡದ ಎದುರು ಜಯ ಸಾಧಿಸಿದವು.
ದಿನದ ಇನ್ನೆರಡು ಪಂದ್ಯಗಳಲ್ಲಿ ಒಡಿಶಾ 25-18, 25-20, 25-21ರಿಂದ ತೆಲಂಗಾಣ ಎದುರು, ಕೇರಳ25-13, 25-10, 25-14ರಿಂದ ದೆಹಲಿ ತಂಡಗಳ ಎದುರು ಗೆಲುವು ಸಾಧಿಸಿದವು.