ಪ್ರೊ ಕಬಡ್ಡಿ ಲೀಗ್: ಪುಣೇರಿ ವಿರುದ್ಧ ಬೆಂಗಾಲ್‌ ಜಯಭೇರಿ

7

ಪ್ರೊ ಕಬಡ್ಡಿ ಲೀಗ್: ಪುಣೇರಿ ವಿರುದ್ಧ ಬೆಂಗಾಲ್‌ ಜಯಭೇರಿ

Published:
Updated:
Deccan Herald

ಅಹಮ್ಮದಾಬಾದ್‌: ಸಂಘಟಿತ ಆಟ ಆಡಿದ ಬೆಂಗಾಲ್ ವಾರಿಯರ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 26–22ರಿಂದ ಗೆದ್ದರು.

ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾದಲ್ಲಿ ನಡೆದ ಪಂದ್ಯದ ಮೊದಲ ಎರಡು ರೈಡ್‌ಗಳಲ್ಲಿ ಬೆಂಗಾಲ್ ಮೇಲುಗೈ ಸಾಧಿಸಿತು. ನಂತರ ಪಲ್ಟನ್ ಆಟಗಾರರು ತಿರುಗೇಟು ನೀಡಿದರು.

ನಂತರ ಉಭಯ ತಂಡಗಳು ಸಮಬಲದ ಆಟವಾಡಿದರು. ನಾಲ್ಕನೇ ನಿಮಿಷದಿಂದ ಪಲ್ಟನ್‌ ಮತ್ತೆ ಲಯ ಕಂಡುಕೊಂಡಿತು. ಮೊದಲಾರ್ಧದ ಮುಕ್ತಾಯಕ್ಕೆ ಪುಣೇರಿ 13–12ರ ಮನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತಷ್ಟು ರೋಚಕವಾಯಿತು. ಅಂತಿಮವಾಗಿ ಬೆಂಗಾಲ್ ಜಯ ತನ್ನದಾಗಿಸಿಕೊಂಡಿತು. ಮಣಿಂದರ್ ಸಿಂಗ್ ಆರು, ರವೀಂದ್ರ ಐದು ಮತ್ತು ಮಹೇಶ್ ಗೌಡ್ ಮೂರು ಪಾಯಿಂಟ್ ಗಳಿಸಿದರು. ಪುಣೇರಿ ಪರ ಮೋರೆ ಒಂಬತ್ತು, ಗಿರೀಶ್ ಎರ್ನಕ್‌ ಮತ್ತು ಮೋನು ತಲಾ ಮೂರು ಪಾಯಿಂಟ್ ಗಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !