ಕಬಡ್ಡಿ: ಪಲ್ಟನ್‌ಗೆ ಜಯ

7

ಕಬಡ್ಡಿ: ಪಲ್ಟನ್‌ಗೆ ಜಯ

Published:
Updated:

ಚೆನ್ನೈ: ಆಲ್‌ರೌಂಡ್‌ ಸಾಮರ್ಥ್ಯ ತೋರಿದ ಪುಣೇರಿ ಪಲ್ಟನ್‌ ತಂಡ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಪಂದ್ಯದಲ್ಲಿ ಗೆದ್ದಿದೆ.

ಸೋಮವಾರ ನಡೆದ ಹಣಾ ಹಣಿಯಲ್ಲಿ ಪುಣೇರಿ 34–22 ಪಾಯಿಂಟ್ಸ್‌ನಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು.

ಪುಣೇರಿ ತಂಡದ ನಿತಿನ್‌ ತೋಮರ್‌ ಏಳು ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ಜಿ.ಬಿ ಮೋರೆ ಮತ್ತು ದೀ‍‍‍ಪಕ್‌ ಕುಮಾರ್‌ ದಹಿಯಾ ಅವರೂ ರೈಡಿಂಗ್‌ನಲ್ಲಿ ಮಿಂಚಿದರು. ಇವರು ಕ್ರಮವಾಗಿ ಆರು ಮತ್ತು ಐದು ಪಾಯಿಂಟ್ಸ್‌ ಹೆಕ್ಕಿದರು.

ಹರಿಯಾಣ ತಂಡದ ವಿಕಾಸ್‌ ಕಂಡೋಲಾ (8 ಪಾಯಿಂಟ್ಸ್‌) ರೈಡಿಂಗ್‌ನಲ್ಲಿ ಮೋಡಿ ಮಾಡಿದರು. ಏಳು ನಿಮಿಷಗಳ ಆಟ ಮುಗಿದಾಗ 2–4ರಿಂದ ಹಿನ್ನಡೆ ಕಂಡಿದ್ದ ಪುಣೇರಿ ತಂಡ ನಂತರ ಅಮೋಘ ಸಾಮರ್ಥ್ಯ ತೋರಿ ಅಭಿಮಾನಿಗಳನ್ನು ರಂಜಿಸಿತು. 15–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಈ ತಂಡ ದ್ವಿತೀಯಾರ್ಧದಲ್ಲೂ ಚುರುಕಿನ ಆಟ ಆಡಿ ಗೆಲುವಿನ ತೋರಣ ಕಟ್ಟಿತು.

ಯೋಧಾಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಯು.‍ಪಿ.ಯೋಧಾ ತಂಡ 37–32 ಪಾಯಿಂಟ್ಸ್‌ನಿಂದ ತಮಿಳ್‌ ತಲೈವಾಸ್‌ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !