ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 20ರಿಂದ ಪ್ರೊ ಕಬಡ್ಡಿ ಟೂರ್ನಿ

ಆಗಸ್ಟ್ 31ರಿಂದ ಸೆಪ್ಟೆಂಬರ್‌ 6ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ:ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಿಂದ ಆರಂಭವಾಗಲಿದೆ. ಅಕ್ಟೋಬರ್‌ 19ರಂದು ಫೈನಲ್ ಪಂದ್ಯ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಯು ಮುಂಬಾ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆಗಸ್ಟ್ 31ರಿಂದ ಸೆಪ್ಟೆಂಬರ್‌ 6ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು ನಡೆಯಲಿವೆ. ತವರಿನ ತಂಡದ ನಾಲ್ಕು ಪಂದ್ಯಗಳು ಇಲ್ಲಿ ಆಯೋಜನೆಯಾಗಿವೆ.

ಮೊದಲ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡವು ಪಾಟ್ನಾ ಪೈರೇಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಪ್ರತಿಯೊಂದು ತಂಡವು ಪ್ರತಿ ತಂಡವನ್ನು ಎರಡು ಬಾರಿ ಎದುರಿಸಲಿದ್ದು, ಅಗ್ರ ಆರು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿವೆ.

ಹೋದ ಎರಡು ಆವೃತ್ತಿಗಳಲ್ಲಿಯೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆದಿರಲಿಲ್ಲ. 2017ರಲ್ಲಿ ನಾಗಪುರ ಮತ್ತು 2018ರಲ್ಲಿ ಪುಣೆ ಬೆಂಗಳೂರು ಬುಲ್ಸ್‌ ತಂಡದ ಕ್ರೀಡಾಂಗಣಗಳಾಗಿದ್ದವು. ಬುಲ್ಸ್ ತಂಡವು ಹೋದ ವರ್ಷ ಚಾಂಪಿಯನ್‌ ಆಗಿತ್ತು.

ಈ ಬಾರಿ ಸಂಜೆ 7.30ರಿಂದ ಪಂದ್ಯಗಳು ಆರಂಭವಾಗಲಿವೆ. ನೂತನ ಕೋಚ್‌ಗಳೂ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪುಣೇರಿ ಪಲ್ಟನ್‌ ಪರ ಅನೂಪ್‌ಕುಮಾರ್ ಹಾಗೂ ಹರ್ಯಾಣ ಸ್ಟೀಲರ್ಸ್ ಪರ ರಾಕೇಶ್‌ಕುಮಾರ್‌ ಕೋಚಿಂಗ್‌ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಜುಲೈ 27ರಿಂದ ಆಗಸ್ಟ್ 2ರವರೆಗೆ ಮುಂಬೈ ಲೆಗ್‌ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್‌ 19ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT