ಶುಕ್ರವಾರ, ಆಗಸ್ಟ್ 23, 2019
21 °C

ಪ್ರೊ ಕಬಡ್ಡಿ: ತಲೈವಾಸ್‌ ಜಯಭೇರಿ

Published:
Updated:
Prajavani

ಅಹಮದಾಬಾದ್ (ಪಿಟಿಐ): ರೋಹಿತ್ ಗುಲಿಯಾ (9 ಪಾಯಿಂಟ್ಸ್‌), ಸುನಿಲ್ ಕುಮಾರ್‌ (6 ಪಾಯಿಂಟ್ಸ್) ಮತ್ತು ಸಚಿನ್ (5 ಪಾಯಿಂಟ್ಸ್) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ತಮಿಳ್ ತಲೈವಾಸ್ ಪ್ರೊ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್‌ ತಂಡವನ್ನು 34–28ರಲ್ಲಿ ಮಣಿಸಿತು.

ಮೊದಲಾರ್ಧ ಮುಕ್ತಾಯಗೊಂಡಾಗ ತಲೈವಾಸ್ 15–10ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.ದ್ವಿತೀಯಾರ್ಧದಲ್ಲಿ ತಲೈವಾಸ್ ಮುನ್ನಡೆಯನ್ನು ಹೆಚ್ಚಿಸುತ್ತ ಸಾಗಿತು. ತಿರುಗೇಟು ನೀಡಲು ಫಾರ್ಚೂನ್‌ಜೈಂಟ್ಸ್ ನಡೆಸಿದ ಪ್ರಯತ್ನವನ್ನು ತಲೈವಾಸ್ ವಿಫಲಗೊಳಿಸಿತು. 9 ಪಾಯಿಂಟ್ ಗಳಿಸಿದ ತಲೈವಾಸ್‌ನ ಅಜಯ್ ಠಾಕೂರ್ 1800 ರೇಡ್‌ಗಳ ಸಾಧನೆ ಮಾಡಿದರು. ಮೋಹಿತ್ ಚಿಲ್ಲಾರ್ 5, ಮಂಜೀತ್ ಚಿಲ್ಲಾರ್ ಮತ್ತು ರಾಹುಲ್ ಚೌಧರಿ ತಲಾ 4 ಪಾಯಿಂಟ್ ಗಳಿಸಿದರು. ಮೋಹಿತ್ 500 ಟ್ಯಾಕಲ್‌ಗಳನ್ನು ದಾಖಲಿಸಿದರು.

ದಬಂಗ್‌ಗೆ ಗೆಲುವು:ಮತ್ತೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡ ಪುಣೇರಿ ಪಲ್ಟನ್ ಎದುರು 32–30ರಲ್ಲಿ ಗೆದ್ದಿತು.

Post Comments (+)