ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ಗೆ ಜಯ

7

ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ಗೆ ಜಯ

Published:
Updated:
Deccan Herald

ವಿಶಾಖಪಟ್ಟಣ: ಆತಿಥೇಯ ತೆಲಗು ಟೈಟನ್ಸ್‌ ತಂಡವು ಗುರುವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡವು 41–36 ರಿಂದ ಪಟ್ನಾ ಪೈರೆಟ್ಸ್‌ ವಿರುದ್ಧ ಗೆದ್ದಿತು.

ಟೈಟನ್ಸ್‌ ಗೆಲುವಿನಲ್ಲಿ ರಾಹುಲ್ ಚೌಧರಿ ಪ್ರಮುಖ ಪಾತ್ರ ವಹಿಸಿದರು. ರೇಡಿಂಗ್‌ನಲ್ಲಿ 11 ಮತ್ತು ಎರಡು ಬೋನಸ್ ಪಾಯಿಂಟ್‌ ಗಳಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ನಿಲೇಶ್ ಸಾಳುಂಕೆ ರೇಡಿಂಗ್‌ನಲ್ಲಿ ಆರು, ಟ್ಯಾಕಲ್‌ನಲ್ಲಿ ಒಂದು ಮತ್ತು ಬೋನಸ್‌ನಲ್ಲಿ ಎರಡು ಪಾಯಿಂಟ್ಸ್‌ ಗಳಿಸಿದರು.

ವಿಶಾಲ್ ಭಾರದ್ವಾಜ್ ರಕ್ಷಣೆಯಲ್ಲಿ ಮಿಂಚಿದರು. ನಾಲ್ಕು ಅಂಕ ಗಳಿಸಿದರು. ಪಟ್ನಾ ಪೈರೇಟ್ಸ್‌ ಕೂಡ ತಿರುಗೇಟು ನೀಡುವ ಪ್ರಯತ್ನ ಮಾಡಿತು. ಪ್ರದೀಪ್ ನರ್ವಾಲ್ ಅವರು ಹತ್ತು ಅಂಕಗಳನ್ನು ಸೂರೆ ಮಾಡಿದರು.

ವಿಜಯ್ ನಾಲ್ಕು ಬೋನಸ್, ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಒಂದೊಂದು ಪಾಯಿಂಟ್ ಕಬಳಿಸಿದರು. ಆದರೆ, ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಸಫಲರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !