ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ರೇಸ್‌ ಆರಂಭಕ್ಕೆ ಬಿಟಿಸಿ ಚಿತ್ತ

Last Updated 12 ಜುಲೈ 2020, 4:11 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ತಿಂಗಳ ನಂತರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) ರೇಸಿಂಗ್ ಚಟುವಟಿಕೆಗಳು ಮರುಆರಂಭವಾಗಲಿವೆ. ಮುಂದಿನ ತಿಂಗಳು ರೇಸ್‌ಗಳನ್ನು ಆರಂಭಿಸಲು ಕ್ಲಬ್‌ ನಿರ್ಧರಿಸಿದೆ.

’ಇವತ್ತು ನಡೆದ ಸಭೆಯು ಫಲಪ್ರದವಾಯಿತು. ಸಮಿತಿಯ ಸದಸ್ಯರು, ವೈದ್ಯರು ಮತ್ತು ತರಬೇತುದಾರರು ಭಾಗವಹಿಸಿದ್ದರು‘ ಎಂದು ಬಿಟಿಸಿ ಮುಖ್ಯಸ್ಥ ವಿನೋದ್ ಶಿವಪ್ಪ ತಿಳಿಸಿದ್ದಾರೆ.

ಕೊರೊನಾ ವೈರಸ್ ಪ್ರಸರಣದ ಕಾರಣ ಹೋದ ಮಾರ್ಚ್‌ ತಿಂಗಳಿನಿಂದ ರೇಸ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

’ರೇಸ್‌ಗಳನ್ನು ಆರಂಭಿಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ. ಎಂಟರಿಂದ ಹತ್ತು ದಿನಗಳ ರೇಸ್‌ಗಳನ್ನು ನಡೆಸಲು ಯೋಜಿಸಿದ್ದೇವೆ. ಕುದುರೆಗಳಿಗೆ ವ್ಯಾಯಾಮ, ತಾಲೀಮು ನೀಡಲಾಗುತ್ತಿದೆ. ಟ್ರ್ಯಾಕ್‌ ಸಿದ್ಧತೆಗಳು ಆರಂಭವಾಗುತ್ತವೆ‘ ಎಂದು ತಿಳಿಸಿದರು.

ಆನ್‌ಲೈನ್‌ ಬೆಟ್ಟಿಂಗ್ ನಡೆಸಲು ಈಚೆಗೆ ಕರ್ನಾಟಕ ಸರ್ಕಾರವು ಬಿಟಿಸಿಗೆ ಅನುಮತಿ ನೀಡಿತ್ತು.

ಬಿಟಿಸಿಯ ಪಶುವೈದ್ಯರೊಬ್ಬರಿಗೆ ಈಚೆಗೆ ಕೋವಿಡ್ ದೃಢಪಟ್ಟಿತ್ತು. ಆದರೆ ಅವರು ಹಲವು ದಿನಗಳಿಂದ ಕ್ಲಬ್‌ಗೆ ಬಂದಿರಲಿಲ್ಲ. ಗುರುವಾರದಂದು ಕ್ಲಬ್‌ನ ರೈಡಿಂಗ್ ವಾಯ್‌ ಒಬ್ಬರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ. ಅವರನ್ನು ಐಸೋಲೇಟ್ ಮಾಡಲಾಗಿದೆ. ಕ್ಲಬ್‌ನಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಮೂಲಗಳು ದೃಢಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT