ಹಾಕಿ: ಆರ್‌.ಡಿ.ಟಿ ತಂಡದ ಚಾಂಪಿಯನ್‌

7

ಹಾಕಿ: ಆರ್‌.ಡಿ.ಟಿ ತಂಡದ ಚಾಂಪಿಯನ್‌

Published:
Updated:
Deccan Herald

ಬೆಂಗಳೂರು: ಅನಂತಪುರದ ಆರ್‌.ಡಿ.ಟಿ ತಂಡ, ಡಾ.ಜಿ.ಎಸ್‌.ರಾಂಧವ ಸ್ಮರಣಾರ್ಥ ಇಂದಿರಾನಗರದ ರೋಟರಿ ಬೆಂಗಳೂರು ಸಂಸ್ಥೆ ಆಯೋಜಿಸಿದ್ದ ಅಂತರ ಶಾಲಾ ಹಾಕಿ ಟೂರ್ನಿಯ ಪ್ರಶಸ್ತಿ ಗೆದ್ದಿತು.

ಸೋಮವಾರ ನಡೆದ ಫೈನಲ್‌ನಲ್ಲಿ ಈ ತಂಡ ಕೂಡಿಗೆ ಕ್ರೀಡಾಶಾಲೆ ತಂಡವನ್ನು 5–2ರಿಂದ ಮಣಿಸಿತು. 10ನೇ ನಿಮಿಷದಲ್ಲಿ ತರುಣ್‌ ಕುಮಾರ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿ ಆರ್‌.ಡಿ.ಟಿ ಸಂಭ್ರಮಿಸಿತು. ಆದರೆ ಗಣೇಶ್‌ ಎಂ.ಅವರ ಗೋಲಿನ ಮೂಲಕ ಕೂಡಿಗೆ ಶಾಲೆ ತಂಡ ತಿರುಗೇಟು ನೀಡಿತು. 24ನೇ ನಿಮಿಷದಲ್ಲಿ ಕೂಡಿಗೆ ತಂಡಕ್ಕೆ ಯಶವಂತ್‌ ಮುನ್ನಡೆ ತಂದುಕೊಟ್ಟರು.

ಆದರೆ 33, 48, 54 ಮತ್ತು 57ನೇ ನಿಮಿಷಗಳಲ್ಲಿ ಕ್ರಮವಾಗಿ ಜಸ್ವಂತ್‌, ವೆಂಕಟೇಶ್‌, ತರುಣ್ ಕುಮಾರ್‌ ಹಾಗೂ ಜಯಂತ್‌ ಕುಮಾರ್‌ ಅವರ ಅಮೋಘ ಗೋಲುಗಳು ಆರ್‌.ಡಿ.ಟಿಗೆ ಪ್ರಶಸ್ತಿ ಗಳಿಸಿಕೊಟ್ಟವು.

ಸೇಂಟ್‌ ಅಂಥೋಣಿ ಶಾಲೆಯ ಪ್ರಣವ್‌ ಉತ್ತಮ ಗೋಲ್‌ ಕೀಪರ್, ಕೂಡಿಗೆ ಕ್ರೀಡಾಶಾಲೆಯ ಗಣೇಶ ಉತ್ತಮ ಫಾರ್ವರ್ಡ್‌ ಆಟಗಾರ, ಸೇಂಟ್‌ ಜೋಸೆಫ್ ಶಾಲೆಯ ಹರ್ಷಕಮಲ್‌ ಉತ್ತಮ ಹಾಫ್‌ಬ್ಯಾಕ್‌ ಆಟಗಾರ, ಪೊನ್ನಂಪೇಟೆ ಕ್ರೀಡಾಶಾಲೆಯ ಮೌರ್ಯ ತಿಮ್ಮಯ್ಯ ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !