ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ಗೆ ರೇಸಿಂಗ್ ತಪ್ಪಿಸಿಕೊಳ್ಳುತ್ತಿರುವ ಕೊರಗಿ

Last Updated 28 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಸ್‌ಉಪಟಳದಿಂದಾಗಿ ವಿಶ್ವದೆಲ್ಲೆಡೆ ಎಲ್ಲ ಕ್ರೀಡಾ ಚಟುವಟಿಕೆಗಳೂ ಸ್ತಬ್ಧವಾಗಿವೆ.ಮೋಟಾರ್ ಸ್ಪೋರ್ಟ್ಸ್‌ ಕ್ಷೇತ್ರಕ್ಕೂ ಇದು ಬಿಟ್ಟಿಲ್ಲ.

ಪ್ರತಿನಿತ್ಯ ಒಂದಿಲ್ಲೊಂದು ರೇಸ್ ಅಥವಾ ತರಬೇತಿಯಲ್ಲಿ ತೊಡಗಿಕೊಂಡಿರುತ್ತಿದ್ದ ಎಫ್‌ ಒನ್ ರೇಸ್‌ ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್‌ ಅವರಿಗೆ ಈಗ ಬೇಸರ ಕಾಡುತ್ತಿದೆ.

‘ನಾನು ಪ್ರತಿದಿನ ರೇಸ್‌ನಲ್ಲಿರುತ್ತಿದ್ದೆ. ಎಂಟನೇ ವಯಸ್ಸಿನಿಂದಲೂ ಅದೇ ನನ್ನ ದಿನಚರಿಯಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘ ಅವಧಿಯವರೆಗೆ ರೇಸಿಂಗ್‌ನಿಂದ ದೂರ ಇದ್ದೇನೆ’ ಎಂದು ಹ್ಯಾಮಿಲ್ಟನ್ ಹೇಳಿದ್ದಾರೆ.

‘ಜೀವನ ಮತ್ತು ಉಸಿರಾಗಿರುವ ಚಟುವಟಿಕೆಯನ್ನು ದೀರ್ಘ ಕಾಲ ಮಾಡಲು ಸಾಧ್ಯವಾಗದಿರುವಾಗ ಬಹಳ ಬೇಸರವಾಗುತ್ತದೆ. ಆದರೂ ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವು ಸಕಾರಾತ್ಮಕ ಅಂಶಗಳನ್ನು ಕಲಿಯಬೇಕು’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬ್ರಿಟಿಷ್ ಮರ್ಸಿಡಿಸ್ ಡ್ರೈವರ್ ಆಗಿರುವ ಹ್ಯಾಮಿಲ್ಟನ್ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT