ಭಾನುವಾರ, ಏಪ್ರಿಲ್ 11, 2021
26 °C

ರಷ್ಯನ್‌ ಬ್ಯಾಡ್ಮಿಂಟನ್‌‌ ಭಾರತ ತಂಡದ ಸವಾಲು ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ವ್ಲಾಡಿವೊಸ್ಟಾಕ್‌, ರಷ್ಯಾ: ಭಾರತದ ಮೇಘನಾ ಜಕ್ಕಂಪುಡಿ, ರಷ್ಯನ್‌ ಓಪನ್‌ ಬಿಡಬ್ಲ್ಯುಎಫ್‌ ಟೂರ್‌ ಸೂಪರ್‌ 100 ಟೂರ್ನಿಯಲ್ಲಿ ಮಹಿಳಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಹೊರಬಿದ್ದರು.

ಏಳನೇ ಶ್ರೇಯಾಂಕದ ಪಡೆದಿದ್ದ ಅದ್ನಾನ್‌ ಮೌಲಾನಾ– ಮಿಷೆಲ್ಲೆ ಕ್ರಿಸ್ಟಿನ್‌ ಬಂಡಾಸೊ ಜೋಡಿ ಶನಿವಾರ ನಡೆದ ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಮೇಘನಾ– ಧ್ರುವ್ ಕಪಿಲ ಜೋಡಿಯನ್ನು 21–6, 21–15ರಲ್ಲಿ ಸೋಲಿಸಿತು. 27 ನಿಮಿಷಗಳಲ್ಲಿ ಭಾರತದ ಡಬಲ್ಸ್‌ ತಂಡ ಶರಣಾಯಿತು.

ಈ ಪಂದ್ಯದ ಬಳಿಕ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಮೇಘನಾ– ಕರ್ನಾಟಕದ ಪೂರ್ವೀಶಾ ಎಸ್‌.ರಾಮ್‌ ಜೋಡಿಯನ್ನು ನಾಲ್ಕನೇ ಶ್ರೇಯಾಂಕದ ಮಿಕಿ ಕಾಶಿಹರಾ– ಮಿಯುಕಿ ಕಟೊ (ಜಪಾನ್‌) ಜೋಡಿ 10–21, 8–21ರಿಂದ ಸೋಲಿಸಿತು. ಭಾರತದ ಜೋಡಿ ಅಗ್ರ ಶ್ರೇಯಾಂಕದ ಪಡೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು