ಗುರುವಾರ , ಜೂನ್ 30, 2022
24 °C

ಅರುಣಾ ದೂರು: ತನಿಖೆಗೆ ಸಮಿತಿ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಫಿಟ್ನೆಸ್ ಪರೀಕ್ಷೆಯ ಸಂದರ್ಭದಲ್ಲಿ ಅನುಮತಿ ಪಡೆಯದೆಯೇ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಜಿಮ್ನಾಸ್ಟ್‌ ಅರುಣಾ ಬುದ್ಧ ರೆಡ್ಡಿ ದೂರಿರುವ ಹಿನ್ನೆಲೆಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತನಿಖೆಗೆ ಮೂವರ ಸಮಿತಿ ರಚಿಸಿದೆ. 

ಸಾಯ್‌ ಕಾರ್ಯನಿರ್ವಾಹಕ ನಿರ್ದೇಶಕಿ ರಾಧಿಕಾ ಶ್ರಿರಾಮ್ ಅವರಿಗೆ ತಂಡದ ನೇತೃತ್ವ ವಹಿಸಲಾಗಿದ್ದು ಕೋಚ್ ಕಮಲೇಶ್ ತಿವಾನ ಮತ್ತು ಉಪನಿರ್ದೇಶಕ ಕೈಲಾಶ್‌ ಮೀನಾ ಇದ್ದಾರೆ. ಕೋಚ್‌ ರೋಹಿತ್ ಜೈಸ್ವಾಲ್ ವಿರುದ್ಧ ಅರುಣಾ ರೆಡ್ಡಿ ದೂರು ದಾಖಲಿಸಿದ್ದರು. ಆದರೆ ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್ ರೋಹಿತ್ ಅವರನ್ನು ಆರೋಪಮುಕ್ತಗೊಳಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.