ಬುಧವಾರ, ಜನವರಿ 29, 2020
28 °C

ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಸೌರಭ್‌ ಚೌಧರಿ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್‌: ಯುವ ಶೂಟರ್‌ ಸೌರಭ್‌ ಚೌಧರಿ, ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಉತ್ತರಪ್ರದೇಶದ ಹುಡುಗ, ಪುರುಷರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ 246.4 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನ ಸಂಪಾದಿಸಿದರು. ಹರಿಯಾಣದ ಸರಬ್ಜೋತ್‌ ಸಿಂಗ್‌ (243.9 ಪಾಯಿಂಟ್ಸ್) ಎರಡನೇ ಸ್ಥಾನ ಗಳಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಅಭಿಷೇಕ್‌ ವರ್ಮಾ ಅವರಿಗೆ ಕಂಚು ಒಲಿಯಿತು.

ಅಭಿಷೇಕ್‌ ಹಾಗೂ ಸರಬ್ಜೋತ್‌ ಜೊತೆಗೂಡಿ ತಂಡ ವಿಭಾಗದಲ್ಲಿ ಹರಿಯಾಣಕ್ಕೆ ಚಿನ್ನ ಗೆದ್ದುಕೊಟ್ಟರು.

ಜೂನಿಯರ್‌ ಪುರುಷರ ವಿಭಾಗದಲ್ಲಿ ಸರಬ್ಜೋತ್‌ ಚಿನ್ನಕ್ಕೆ ಮುತ್ತಿಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು