ಗುರುವಾರ , ಏಪ್ರಿಲ್ 9, 2020
19 °C

ನೀರಜ್ ಚೋಪ್ರಾ 14 ದಿನ ಎನ್ಐಎಸ್ ಒಳಗೆ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟರ್ಕಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವಾಪಸಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ 14 ದಿನ ಪಟಿಯಾಲದ ರಾಷ್ಟ್ರೀಯ ಕ್ರೀಡಾಸಂಸ್ಥೆಯ (ಎನ್ಐಎಸ್) ಒಳಗೇ ಇರುವಂತೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಶುಕ್ರವಾರ ಸೂಚಿಸಿದೆ.

ಸಂಸ್ಥೆಯ ಆವರಣದಲ್ಲಿರುವ ವಸತಿನಿಲಯದ ಕೊಠಡಿಯಲ್ಲಿ ಅವರು ಸ್ವಯಂ ಪ್ರತ್ಯೇಕತಾವಾಸದಲ್ಲಿ ಇರಬೇಕು. ಯಾರೊಂದಿಗೂ ಬೆರೆಯಬಾರದು ಎಂದು ಸೂಚಿಸಲಾಗಿದೆ. ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿದ್ದಾರೆ. ಬುಧವಾರ ಟರ್ಕಿಯಿಂದ ವಾಪಸಾಗಿದ್ದರು.

ಮನೆಯಲ್ಲೇ ಇರುವುದಾಗಿ ಹೇಳಿರುವ ಮತ್ತೊಬ್ಬ ಜಾವೆಲಿನ್ ಥ್ರೋ ಪಟು ಶಿವಪಾಲ್ ಸಿಂಗ್ ಎನ್ಐಎಸ್ ತೊರೆದಿದ್ದಾರೆ. ಅವರು ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಟರ್ಕಿಯಿಂದ ವಾಪಸಾಗಿರುವ ನೀರಜ್ ಮತ್ತು ರೋಹಿತ್ ಯಾದವ್ ಅವರಿಗೆ ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿದೆ. ಎನ್ಐಎಸ್‌ನಲ್ಲಿ ಇರಬೇಕಾದರೆ ಅವರು 14 ದಿನ ಕೊಠಡಿಯಿಂದ ಹೊರಬರುವಂತಿಲ್ಲ. ಕೊಠಡಿಯ ಸಮೀಪದಲ್ಲೇ ಇರುವ ಹಳೆಯ ಜಿಮ್ ಅನ್ನು ಅವರ ವ್ಯಾಯಾಮಕ್ಕಾಗಿ ಒದಗಿಸಲಾಗಿದೆ’ ಎಂದು ಎನ್ಐಎಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ನೀರಜ್ ಒಳಗೊಂಡಂತೆ ವಿದೇಶದಿಂದ ವಾಪಸಾಗಿರುವ ಕ್ರೀಡಾಪಟುಗಳನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಆದರೂ ಅವರೆಲ್ಲರೂ 14 ದಿನ ಸ್ವಯಂ ಪ್ರತ್ಯೇಕತಾವಾಸದಲ್ಲಿ ಇರುವಂತೆ ಸೂಚಿಸಲಾಗಿದೆ’ ಎಂದು ಸಾಯ್ ಮೂಲಗಳು ವಿವರಿಸಿವೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು