ಕಹಿ ಮರೆಸಿದ ಗೆಲುವು: ಶಿವ ಥಾಪ

ಭಾನುವಾರ, ಮೇ 26, 2019
30 °C

ಕಹಿ ಮರೆಸಿದ ಗೆಲುವು: ಶಿವ ಥಾಪ

Published:
Updated:
Prajavani

ನವದೆಹಲಿ: ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದದ್ದು, ಜೀವನಕ್ಕೆ ಹೊಸ ತಿರುವು ನೀಡಿದೆ. ಕಳೆದ ವರ್ಷದ ಕಹಿಯನ್ನು ಮರೆಸಿದೆ ಎಂದು ಬಾಕ್ಸರ್ ಶಿವಥಾಪ ಹೇಳಿದ್ದಾರೆ. 

ಆಕ್ರಮಣಕಾರಿಯಾಗಿ ಆಡುವುದು ನನಗಿಷ್ಟ. ರಿಂಗ್ ಒಳಗೆ ಇಳಿದಾಗ ಜಗತ್ತು, ಪ್ರಸಿದ್ಧಿ ಎಲ್ಲವನ್ನು ಮರೆತು ಆ ಕ್ಷಣದೊಂದಿಗೆ ಹೋರಾಡುತ್ತೇನೆ. ಹೀಗಾಗಿ ಈ ವರ್ಷ ನನಗೆ ಜಯ ಒಲಿದಿದೆ ಎಂದು  ಹೇಳಿದ್ದಾರೆ.

ಮೊದಲ ಬೆಲ್‌ ಒಳಗೆ ಎದುರಾಳಿಯ ಮನಸ್ಸಿನ ಮೇಲೆ ಭಯ ಮೂಡಿಸುವುದೇ ನನ್ನ ಗುರಿ. ‌ಧೈರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನನ್ನ ಪ್ರಯತ್ನ ಮುಂದುವರಿಸುತ್ತೇನೆ. ಅಂತಿಮವಾಗಿ ಗೆಲ್ಲುವುದಷ್ಟೇ ನನಗೆ ಮುಖ್ಯ. ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಉತ್ತಮ ಸಾಧನೆ ತೋರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಶಿವ ಥಾಪ ಏಷ್ಯನ್‌ ಬಾಕ್ಸಿಂಗ್‌ನಲ್ಲಿ ನಾಲ್ಕು ಪದಕ ಗಳಿಸಿದ ಮೊದಲ ಭಾರತೀಯ. 2013ರಲ್ಲಿ ಚಿನ್ನ, 2015 ಮತ್ತು 2017ರಲ್ಲಿ ಬೆಳ್ಳಿ, 2019ರಲ್ಲಿ ಕಂಚು ಗೆದ್ದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !