ಶನಿವಾರ, ಮೇ 15, 2021
25 °C

ಐಒಸಿಯ ‘ಬಿಲೀವ್‌ ಇನ್‌ ಸ್ಪೋರ್ಟ್ಸ್‘ ಅಭಿಯಾನಕ್ಕೆ ರಾಯಭಾರಿಯಾಗಿ ಸಿಂಧು ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಹಾಗೂ ಕೆನಡಾದ ಮಿಶೆಲ್ಲೆ ಲೀ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ‘ಬಿಲೀವ್ ಇನ್ ಸ್ಪೋರ್ಟ್ಸ್‘ ಅಭಿಯಾನಕ್ಕೆ ಕ್ರೀಡಾ ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಸೋಮವಾರ ಈ ವಿಷಯ ತಿಳಿಸಿದೆ.

ಈ ಇಬ್ಬರು ಆಟಗಾರ್ತಿಯರು ಕಳೆದ ವರ್ಷದ ಏಪ್ರಿಲ್‌ನಿಂದ ಬಿಡಬ್ಲ್ಯುಎಫ್‌ನ ‘ಐ ಆ್ಯಮ್ ಬ್ಯಾಡ್ಮಿಂಟನ್‘ ಅಭಿಯಾನದ ರಾಯಭಾರಿಗಳೂ ಆಗಿದ್ದಾರೆ.

‘ಐಒಸಿಯಿಂದ ರಾಯಭಾರಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಯಾವುದೇ ರೂಪದ ಮೋಸದಾಟ ಅಥವಾ ತಾರತಮ್ಯದ ವಿರುದ್ಧ ನಿಂತು ಸಹ ಅಥ್ಲೀಟ್‌ಗಳೊಂದಿಗೆ ಕೈ ಜೋಡಿಸುತ್ತೇನೆ. ಈ ವಿಷಯದಲ್ಲಿ ಒಗ್ಗಟ್ಟಾಗೋಣ‘ ಎಂದು ಪ್ರಕಟಣೆಯಲ್ಲಿ ಸಿಂಧು ಹೇಳಿದ್ದಾರೆ.

ಅಥ್ಲೀಟ್‌ಗಳು, ಕೋಚ್‌ಗಳು ಹಾಗೂ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 2018ರಲ್ಲಿ ‘ಬಿಲೀವ್ ಇನ್ ಸ್ಪೋರ್ಟ್ಸ್‘ ಅಭಿಯಾನ ಆರಂಭಿಸಲಾಗಿದೆ.

ಅಭಿಯಾನಕ್ಕೆ ನೇಮಕಗೊಂಡ ಸಿಂಧು ಹಾಗೂ ಲೀ ಅವರನ್ನು ಬಿಡಬ್ಲ್ಯುಎಫ್‌ ಹಾಗೂ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಅಭಿನಂದಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು