ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಸಿಂಧುಗೆ ಕಠಿಣ ಸವಾಲು

ಡ್ರಾ ‍‍ಪ್ರಕಟ
Last Updated 5 ಮಾರ್ಚ್ 2020, 18:50 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರಿಗೆ ಮುಂಬರುವ ಇಂಡಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

ಇದೇ ತಿಂಗಳ 24ರಿಂದ ಟೂರ್ನಿ ಆರಂಭವಾಗಲಿದ್ದು, ಗುರುವಾರ ಡ್ರಾ ಪ್ರಕಟವಾಗಿದೆ.

2017ರ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಿಂಧುಗೆ ಮೊದಲ ಸುತ್ತಿನಲ್ಲಿ ಹಾಂಗ್‌ಕಾಂಗ್‌ನ ಚೆವುಂಗ್‌ ನಗಾನ್‌ ಯೀ ಸವಾಲು ಎದುರಾಗಲಿದೆ. 2015ರ ಚಾಂಪಿಯನ್‌ ಸೈನಾ, ಚೀನಾ ತೈಪೆಯ ಪಯೀ ಯು ಪೊ ವಿರುದ್ಧ ಸೆಣಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಸೈನಾ, ಇಲ್ಲಿ ಪ್ರಶಸ್ತಿ ಜಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಅಂಗಳಕ್ಕಿಳಿಯಲಿರುವ ಐದನೇ ಶ್ರೇಯಾಂಕದ ಆಟಗಾರ ಕಿದಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಅವರು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರರ ವಿರುದ್ಧ ಹೋರಾಡಲಿದ್ದಾರೆ.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಬಿ.ಸಾಯಿ ಪ್ರಣೀತ್‌, ಆರಂಭಿಕ ಸುತ್ತಿನಲ್ಲಿ ಎಚ್‌.ಎಸ್‌.ಪ್ರಣಯ್‌ ಅವರ ಸವಾಲಿಗೆ ಎದೆಯೊಡ್ಡಲಿದ್ದಾರೆ.

ಸಮೀರ್‌ ವರ್ಮಾ ಅವರು ಥಾಯ್ಲೆಂಡ್‌ನ ಸಿಟ್ಟಿಕೊಮ್‌ ಥಾಮಸಿನ್‌ ಎದುರೂ; ಸೌರಭ್‌ ವರ್ಮಾ, ಚೀನಾ ತೈಪೆಯ ವಾಂಗ್‌ ಜು ವೀ ವಿರುದ್ಧವೂ; ಪರುಪಳ್ಳಿ ಕಶ್ಯಪ್‌, ಥಾಯ್ಲೆಂಡ್‌ನ ಕೋಸಿಟ್‌ ಪೆಟ್‌ಪ್ರಡಾಬ್‌ ಎದುರೂ ಆಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಜಪಾನ್‌ನ ಟಕುರೊ ಹೊಕಿ ಮತ್ತು ಯೂಗೊ ಕೊಬಯಾಶಿ ವಿರುದ್ಧ ಸೆಣಸಲಿದ್ದಾರೆ.

ಕೋವಿಡ್‌–19 ವೈರಸ್‌ ಸೋಂಕು ಭಾರತಕ್ಕೂ ವ್ಯಾಪಿಸಿರುವ ಕಾರಣ, ಈ ಟೂರ್ನಿಯನ್ನೂ ಮುಂದೂಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT