ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಸೈನಾ ಜಯಭೇರಿ

ಮಂಗಳವಾರ, ಏಪ್ರಿಲ್ 23, 2019
33 °C
ಪ್ರಣವ್‌, ಸಿಕ್ಕಿ ರೆಡ್ಡಿ ಜೋಡಿಗೆ ಗೆಲುವು

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಸೈನಾ ಜಯಭೇರಿ

Published:
Updated:
Prajavani

ಸಿಂಗಪುರ: ಭಾರತದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಇವರಿಬ್ಬರು ಕ್ರಮವಾಗಿ ಲ್ಯಾನಿ ಅಲೆಸಾಂಡ್ರ ಮೈನಕಿ ಮತ್ತು ಯೂಲಿಯಾ ಯೋಸೆಫಿನ್ ಸುಸಾಂಟೊ ಅವರನ್ನು ಮಣಿಸಿದರು.

ನಾಲ್ಕನೇ ಶ್ರೇಯಾಂಕಿತ ಸಿಂಧು ಕೇವಲ 27 ನಿಮಿಷಗಳಲ್ಲಿ ಇಂಡೊನೇಷ್ಯಾದ ಆಟಗಾರ್ತಿಯನ್ನು 21–9, 21–7ರಲ್ಲಿ ಮಣಿಸಿದರು. ಮುಂದಿನ ಹಂತದಲ್ಲಿ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ಎದುರು ಸೆಣಸುವರು.

ಆರನೇ ಶ್ರೇಯಾಂಕಿತ ಆಟಗಾರ್ತಿ, ಇಂಡೊನೇಷ್ಯಾದ ಯೂಲಿಯಾ ಅವರನ್ನು ಸೈನಾ 21–16, 21–11ರಿಂದ ಸೋಲಿಸಿದರು. ಅವರಿಗೆ ಎರಡನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಪೊರ್ನಾಪವಿ ಚೊಚುವಾಂಗ್‌ ಎದುರಾಳಿ.

ಡಬಲ್ಸ್ ವಿಭಾಗದಲ್ಲಿ ಆಘಾತ: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರರು ಆರಂಭದಲ್ಲೇ ಆಘಾತ ಅನುಭವಿಸಿದರು. ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಜೋಡಿ ಸ್ಥಳೀಯ ಡ್ಯಾನಿ ಬವಾ ಕೃಷ್ಣಾಂತ ಮತ್ತು ಕೀನ್‌ ಹೀನ್‌ ಲೊಹ್‌ ಅವರಿಗೆ 13–21, 17–21ರಿಂದ ಮಣಿದರು.‌

ಮಿಶ್ರ ವಿಭಾಗದಲ್ಲಿ ಭಾರತ ‘ಮಿಶ್ರ’ ಫಲ ಕಂಡಿತು. ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಭಾರತದವರೇ ಆದ ಅರ್ಜುನ್ ಮತ್ತು ಕೆ.ಮನೀಷಾ ಎದುರು 21–18, 21–7ರಿಂದ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.

ಆದರೆ ಸೌರಭ್‌ ಶರ್ಮಾ ಮತ್ತು ಅನುಷ್ಕಾ ಪಾರಿಖ್‌ ಜೋಡಿ ಥಾಯ್ಲೆಂಡ್‌ನ ಡೆಚಾಪೊಲ್ ಪವರನುಕೊಹ್‌ ಮತ್ತು ಸಾಪ್ಸಿರಿ ತರೆಟಾಂಚಿ ಅವರಿಗೆ 12–21, 12–21ರಿಂದ ಮಣಿದು ಹೊರಬಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !