ಗುರುವಾರ , ಆಗಸ್ಟ್ 11, 2022
24 °C

ಥಾಮಸ್–ಊಬರ್ ಕಪ್ ಫೈನಲ್: ಭಾರತಕ್ಕೆ ಸಿಂಧು–ಶ್ರೀಕಾಂತ್ ನಾಯಕತ್ವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಅವರು ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಒಟ್ಟು 20 ಆಟಗಾರರಿರುವ ತಂಡವನ್ನು ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಬಿಎಐ) ಗುರುವಾರ ಪ್ರಕಟಿಸಿದೆ. ಥಾಮಸ್ ಕಪ್ ಟೂರ್ನಿಯಲ್ಲಿ ಭಾರತವು ಸಿ ಗುಂಪಿನಲ್ಲಿ ಮತ್ತು ಊಬರ್ ಕಪ್‌ ಟೂರ್ನಿಯಲ್ಲಿ ತಂಡವು ಡಿ ಗುಂಪಿನಲ್ಲಿ ಆಡಲಿದೆ. ಅಕ್ಟೋಬರ್‌ 3ರಿಂದ 11ರವರೆಗೆ ಟೂರ್ನಿ ನಡೆಯಲಿದೆ.

ಡೆನ್ಮಾರ್ಕ್ ಓಪನ್ ಮತ್ತು ಮಾಸ್ಟರ್ಸ್‌ ಟೂರ್ನಿಗಳಲ್ಲಿ ಆಡುವ ಭಾರತ ತಂಡಗಳನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.

ತಂಡಗಳು
ಥಾಮಸ್ ಕಪ್:
ಕಿದಂಬಿ ಶ್ರೀಕಾಂತ್, ಪಿ. ಕಶ್ಯಪ್, ಲಕ್ಷ್ಯ ಸೇನ್, ಶುಭಂಕರ್ ಡೇ, ಸಿರಿಲ್ ವರ್ಮಾ, ಮನು ಅತ್ರಿ, ಬಿ. ಸುಮೀತ್ ರೆಡ್ಡಿ, ಎಂ.ಆರ್. ಅರ್ಜುನ್, ಧ್ರುವ ಕಪಿಲಾ, ಕೃಷ್ಣಪ್ರಸಾದ್ ಗರಗ. 

ಊಬರ್ ಕಪ್: ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೂದ್, ಅಶ್ವಿನಿ ಪೊನ್ನಪ್ಪ, ಎನ್. ಸಿಕ್ಕಿ ರೆಡ್ಡಿ, ಪೂಜಾ ದಂಡು, ಸಂಜನಾ ಸಂತೋಷ, ಪೂರ್ವಿಷಾ ಎಸ್ ರಾಮ್, ಜಕ್ಕಂಪುಡಿ ಮೇಘನಾ.

ಡೆನ್ಮಾರ್ಕ್‌ ಓಪನ್ ಮತ್ತು ಡೆನ್ಮಾರ್ಕ್ ಮಾಸ್ಟರ್ಸ್‌: ಕಿದಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಲಕ್ಷ್ಯ ಸೇನ್, ಅಶ್ವಿನಿ ಪೊನ್ನಪ್ಪ, ಪಿ.ವಿ. ಸಿಂಧು, ಎನ್. ಸಿಕ್ಕಿರೆಡ್ಡಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು