ಗುರುವಾರ , ಜೂನ್ 30, 2022
22 °C
ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ

ಭಾರತದ ಮಹಿಳಯರಿಗೆ 6 ಚಿನ್ನದ ಪದಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಆರು ಮಂದಿ ಬಾಕ್ಸರ್‌ಗಳು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಭಾನುವಾರ ಚಿನ್ನದ ಪದಕ ಗೆದ್ದುಕೊಂಡರು.  

ಹಿಸ್ಸಾರ್‌ನ ವಿನಿ ಮಹಿಳೆಯರ 50 ಕೆಜಿ ಫ್ಲೈವೇಟ್‌ ವಿಭಾಗದ ಫೈನಲ್‌ನಲ್ಲಿ ಕಜಕಸ್ತಾನದ ಕರಿನಾ ತೊಕುಬೆ ವಿರುದ್ಧ ಜಯ ಗಳಿಸಿದರು. ಮೊದಲ ಸುತ್ತಿನಲ್ಲಿ ಅಮೋಘ ಆಟವಾಡಿದ ಭಾರತ ಬಾಕ್ಸರ್‌ಗೆ ಎರಡನೇ ಸುತ್ತಿನಲ್ಲಿ ಎದುರಾಳಿ ತಿರುಗೇಟು ನೀಡಿದರು. ಹೀಗಾಗಿ ಅಂತಿಮ ಸುತ್ತು ಕುತೂಹಲ ಮೂಡಿಸಿತು. ಭರ್ಜರಿ ಪಂಚ್‌ಗಳನ್ನು ಪ್ರದರ್ಶಿಸಿದ ಉಭಯ ಬಾಕ್ಸರ್‌ಗಳು ಜಿದ್ದಾಜಿದ್ದಿನ ಹಣಾಹಣಿ ನಡೆಸಿದರು. ಜಯ ವಿನಿ ಅವರ ಪಾಲಾಯಿತು. 

52 ಕೆಜಿ ವಿಭಾಗದಲ್ಲಿ ಯಕ್ಷಿಕ ಕೆಚ್ಚೆದೆಯ ಆಟದ ಮೂಲಕ ಉಜ್ಬೆಕಿಸ್ತಾನದ ರಖೀಮಾ ಬೆಕ್ನಿಯಜೋವ ಎದುರು ಜಯ ಗಳಿಸಿದರು. ಪಾಣಿಪತ್‌ನ ಯಕ್ಷಿಕ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಸಿಕೊಂಡು 4–1ರಲ್ಲಿ ಜಯ ಗಳಿಸಿದರು.

57 ಕೆಜಿ ವಿಭಾಗದಲ್ಲಿ ಜೋರ್ಡಾನ್‌ನ ಅಯಾ ಸುವಿಂದೆ ವಿರುದ್ಧ ವಿಧಿ ಗೆಲುವು ಸಾಧಿಸಿದರು. 60 ಕೆಜಿ ವಿಭಾಗದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ನಿಕಿತಾ ಚಾಂದ್ ಕಜಕಸ್ತಾನದ ಉಲ್ದಾನ ತೌಬೆ ಎದುರು ಜಯ ಗಳಿಸಿ ಮತ್ತೊಮ್ಮೆ ಚಿನ್ನದ ಪಕದಕ್ಕೆ ಮುತ್ತಿಕ್ಕಿದರು.   

63 ಕೆಜಿ ವಿಭಾಗದ ಚಿನ್ನ ಸೃಷ್ಟಿ ಸಾಠೆ ಅವರ ಪಾಲಾಯಿತು. ಕಜಕಸ್ತಾನದ ನುರ್ಸುಲು ಸುಯೆನಲಿ ವಿರುದ್ಧ ಅವರು ಜಯ ಸಾಧಿಸಿದರು. 75 ಕೆಜಿ ವಿಭಾಗದಲ್ಲಿ ರುದ್ರಿಕಾ 5–0ಯಿಂದ ಕಜಕಸ್ತಾನದ ಶುಗ್ಲಿಯಾ ನಿಲಿಬೆ ಅವರನ್ನು ಮಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು