ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್‌ಗೆ ಕರ್ನಾಟಕದ ಬೆಳ್ಳಿಯಪ್ಪ

ದೆಹಲಿ ಮ್ಯಾರಥಾನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ ಆರು ಮಂದಿ; ನಿತೇಂದ್ರ ಸಿಂಗ್‌ಗೆ ಪ್ರಶಸ್ತಿ
Last Updated 27 ಮಾರ್ಚ್ 2022, 14:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬೆಳ್ಳಿಯಪ್ಪ ಸೇರಿದಂತೆ ಆರು ದೂರ ಅಂತರದ ಓಟಗಾರರು ನವದೆಹಲಿಯಲ್ಲಿ ಭಾನುವಾರ ನಡೆದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಡೆಲ್ಲಿ ಮ್ಯಾಥಾರಾನ್‌ನ ಆರನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ನಿತೇಂದ್ರ ಸಿಂಗ್ ರಾವತ್ 2 ತಾಸು 16 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಫುಲ್‌ ಮ್ಯಾರಾಥಾನ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅನೀಶ್ ಥಾಪ ಮಗರ್ (2 ತಾಸು 16 ನಿಮಿಷ 41 ಸೆಕೆಂಡು) ಹಾಗೂ ಅನಿಲ್ ಕುಮಾರ್ ಸಿಂಗ್ (2 ತಾಸು 16 ನಿಮಿಷ 47 ಸೆಕೆಂಡು) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದುಕೊಂಡರು.

ಆಶಿಶ್ ಕುಮಾರ್ (2 ತಾಸು 17 ನಿಮಿಷ, 4 ಸೆಕೆಂಡು), ಎ.ಬಿ.ಬೆಳ್ಳಿಯಪ್ಪ (2 ತಾಸು 17 ನಿಮಿಷ 9 ಸೆಕೆಂಡು) ಮತ್ತು ಕಾಳಿದಾಸ್ ಹಿರವೆ (2 ತಾಸು 18 ನಿಮಿಷ 14 ಸೆಕೆಂಡು) ಕ್ರಮವಾಗಿ 4,5 ಮತ್ತು 6ನೇ ಸ್ಥಾನ ಪಡೆದುಕೊಂಡರು.

ಮುಂದಿನ ಜುಲೈ ಹಾಗೂ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪುರುಷರಿಗೆ 2 ತಾಸು 16 ನಿಮಿಷ 40 ಸೆಕೆಂಡುಗಳ ಸಮಯ ನಿಗದಿ ಮಾಡಲಾಗಿದೆ. ಮಹಿಳೆಯರು 2 ತಾಸು 38 ನಿಮಿಷ 19 ಸೆಕೆಂಡುಗಳ ಸಾಧನೆ ಮಾಡಬೇಕಾಗಿದೆ. ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದ ಅರ್ಹತೆಗೆ ಪುರುಷರಿಗೆ 2 ತಾಸು 18 ನಿಮಿಷ 48 ಸೆಕೆಂಡು ಹಾಗೂ ಮಹಿಳೆಯರಿಗೆ 2 ತಾಸು 39 ನಿಮಿಷ 28 ಸೆಕೆಂಡು ನಿಗದಿಪಡಿಸಲಾಗಿದೆ.

ಮಹಿಳಾ ವಿಭಾಗದ ಪೂರ್ಣ ಮ್ಯಾರಾಥಾನ್‌ನಲ್ಲಿ ಜ್ಯೋತಿ ಗಾವಟೆ 3 ತಾಸು 1 ನಿಮಿಷ 20 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನೂಪುರ್ ಸಿಂಗ್ (3 ತಾಸು 16 ನಿಮಿಷ 3 ಸೆಕೆಂಡು) ಹಾಗೂ ಡಿಸ್ಕೆಟ್ ಡೊಲ್ಮಾ (3 ತಾಸು 22 ನಿಮಿಷ 6 ಸೆಕೆಂಡು) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದರು. ಮೂವರಿಗೂ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ ಟಿಕೆಟ್ ಸಿಗಲಿಲ್ಲ.

ಪುರುಷರ ಹಾಫ್ ಮ್ಯಾರಾಥಾನ್‌ನಲ್ಲಿರೂಪನ್ (1 ತಾಸು 12 ನಿಮಿಷ 2 ಸೆಕೆಂಡು) ಹಾಗೂ ಮಹಿಳೆಯರ ವಿಭಾಗದಲ್ಲಿ ತಾಶಿ ಲಾಡೊಲ್ (1 ತಾಸು 27 ನಿಮಿಷ 48 ಸೆಕೆಂಡು) ಮೊದಲಿಗರಾದರು. ಪುರುಷರ ಟೆನ್‌ ಕೆ ಓಟದಲ್ಲಿ ಅಭಿಷೇಕ್ ಚೌಧರಿ (32 ನಿಮಿಷ 3 ಸೆಕೆಂಡು) ಹಾಗೂ ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್ (39 ನಿಮಿಷ 22 ಸೆಕೆಂಡು) ಪ್ರಶಸ್ತಿ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT