ಯೂತ್‌ ಒಲಿಂಪಿಕ್‌: ಸ್ನೇಹಾ, ಜೆರೆಮಿ ಸ್ಪರ್ಧೆ

6

ಯೂತ್‌ ಒಲಿಂಪಿಕ್‌: ಸ್ನೇಹಾ, ಜೆರೆಮಿ ಸ್ಪರ್ಧೆ

Published:
Updated:

ನವದೆಹಲಿ (ಪಿಟಿಐ): ವೇಟ್‌ಲಿಫ್ಟರ್‌ಗಳಾದ ಜೆರೆಮಿ ಲಾಲ್ರಿನ್ನುಂಗಾ ಹಾಗೂ ಸ್ನೇಹಾ ಸೊರೆನ್ ಅವರು ಮುಂಬರುವ ಯೂತ್‌ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಜೆರೆಮಿ ಅವರು ಯೂತ್‌ ಬಾಲಕರ 62 ಕೆ. ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸ್ನೇಹಾ, ಯೂತ್‌ ಬಾಲಕಿಯರ 48 ಕೆ. ಜಿ. ವಿಭಾಗದಲ್ಲಿ ಸೆಣಸಲಿದ್ದಾರೆ. 

ಬುಧವಾರ ಪಟಿಯಾಲಾದಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಲಾಲ್ರಿನ್ನುಂಗಾ ಅವರು ಸ್ನ್ಯಾಚ್‌ ವಿಭಾಗದಲ್ಲಿ 147 ಕೆ.ಜಿ. ಹಾಗೂ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ 126 ಕೆ. ಜಿ. ಭಾರ ಎತ್ತಿದರು. ಸೊರೆನ್‌, ಸ್ನ್ಯಾಚ್‌ನಲ್ಲಿ 67 ಕೆ. ಜಿ ಹಾಗೂ ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 87 ಕೆ. ಜಿ. ಭಾರ ಎತ್ತಿದರು.

ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಅಕ್ಟೋಬರ್‌ 6ರಿಂದ 13ರವರೆಗೆ ಮೂರನೇ ಯೂತ್‌ ಒಲಿಂಪಿಕ್‌ ಕ್ರೀಡಾಕೂಟ ನಡೆಯಲಿದೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !