ಅಥ್ಲೆಟಿಕ್ಸ್‌: ಆಳ್ವಾಸ್‌ನಿಂದ ನಾಲ್ಕು ಕೂಟ ದಾಖಲೆ

7
ರಾಜ್ಯ ಜೂನಿಯರ್, ಸೀನಿಯರ್ ಅಥ್ಲೆಟಿಕ್

ಅಥ್ಲೆಟಿಕ್ಸ್‌: ಆಳ್ವಾಸ್‌ನಿಂದ ನಾಲ್ಕು ಕೂಟ ದಾಖಲೆ

Published:
Updated:
Deccan Herald

ಮೂಡುಬಿದಿರೆ: ಇಲ್ಲಿಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್‌ ಮತ್ತು ಸೀನಿಯರ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಲ್ಲಿ 2ನೇ ದಿನವಾದ ಮಂಗಳವಾರ 7 ಕೂಟ ದಾಖಲೆ ರಚನೆಯಾಗಿದ್ದು, ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್ 4 ಕೂಟ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ಉಳಿದಂತೆ ಸಾಯ್‌ ಬೆಂಗಳೂರು, ಡಿವೈಇಎಸ್ ಬೆಂಗಳೂರು ಮತ್ತು ಮೈಸೂರು ಜಿಲ್ಲೆ ಅಥ್ಲೆಟಿಕ್ ತಂಡ ತಲಾ ಒಂದೊಂದು ಕೂಟ ದಾಖಲೆ ನಿರ್ಮಿಸಿವೆ. ಹುಡುಗರ 20 ವರ್ಷದೊಳಗಿನವರ ವಿಭಾಗದ 1500 ಮೀಟರ್ಸ್‌ ದೂರವನ್ನು ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಶಶಿಧರ್ ಬಿ.ಎಲ್ 4:00.7 ಸೆಕೆಂಡ್ಸ್‌ನಲ್ಲಿ ಗುರಿಮುಟ್ಟಿ ಈರಪ್ಪ ಹಳಗಣ್ಣವರ್(4:02.1) ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.

20 ವರ್ಷದೊಳಗಿನವರ ಮಹಿಳೆಯರ ಹೈಜಂಪ್‌ನಲ್ಲಿ ಆಳ್ವಾಸ್‌ನ ಅಭಿನಯ ಶೆಟ್ಟಿ 1.75 ಮೀಟರ್ಸ್‌ ಎತ್ತರ ಜಿಗಿದು ಸಹನಾ ಕುಮಾರಿ ಮತ್ತು ಕಾವ್ಯಾ ಮುತ್ತಣ್ಣ ಅವರ (1.74) ದಾಖಲೆಯನ್ನು ಅಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !