ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್‌ನಲ್ಲಿ ಮಿಂಚಿದ ವರುಣ್‌, ನಳಿನಿ

ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ: ಗ್ರೇಟಾ ಮಸ್ಕರೇನ್ಹಸ್‌ ಸಾಧನೆ
Last Updated 29 ಜನವರಿ 2019, 20:13 IST
ಅಕ್ಷರ ಗಾತ್ರ

ಮೈಸೂರು: ಶಿವಮೊಗ್ಗ ಜಿಲ್ಲೆಯ ಎಸ್‌.ಜಿ.ವರುಣ್‌ ಮತ್ತು ಮೈಸೂರು ಜಿಲ್ಲೆಯ ಡಾ.ಎಸ್‌.ನಳಿನಿ ಇಲ್ಲಿ ನಡೆ ಯುತ್ತಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕ್ರಮ ವಾಗಿ ಪುರುಷ ಹಾಗೂ ಮಹಿಳಾ ವಿಭಾ ಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 45 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಬಿರುಸಿನ ಪೈಪೋಟಿ ಕಂಡುಬಂತು. ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಯಾದಗಿರಿ ಜಿಲ್ಲೆಯ ನಾಗೇಶ್‌ ಅವರನ್ನು ಹಿಂದಿಕ್ಕಿದ ಗ್ರಾಮೀಣಾಭಿವೃದ್ಧಿ ಇಲಾಖೆಯ ವರುಣ್‌ ಈ ಸಾಧನೆ ಮಾಡಿದರು.

ಫಲಿತಾಂಶಗಳು

ಪುರುಷರು:45 ವರ್ಷದೊಳಗಿನವರು

200 ಮೀ ಓಟ: ಎಸ್‌.ಜಿ.ವರುಣ್‌ (ಆರ್‌ಡಿಪಿಆರ್‌–ಶಿವಮೊಗ್ಗ)–1, ನಾಗೇಶ್‌ (ಶಿಕ್ಷಣ–ಯಾದಗಿರಿ)–2, ನಾಗರಾಜ್‌ ಬಿ ಲಮಾಣಿ (ನೀರಾವರಿ–ಬೆಳಗಾವಿ)–3

800 ಮೀ ಓಟ: ಎಚ್.ವಸಂತಕುಮಾರ್‌ (ಶಿಕ್ಷಣ–ಶಿವಮೊಗ್ಗ)–1, ಎ.ಎಸ್‌.ಪ್ರಮೋದ್‌ (ಶಿಕ್ಷಣ; ಹಾಸನ)–2, ರೇವಣ್ಣ ಸಿದ್ದಪ್ಪ (ಆರೋಗ್ಯ; ಕಲಬುರ್ಗಿ)–3.

5,000 ಮೀ ಓಟ: ಬಿ.ಎ.ರಾಘವೇಂದ್ರ (ಕಾರಾಗೃಹ; ಕೊಡಗು)–1, ಉದಯ ಗೌಡ (ಶಿಕ್ಷಣ; ಮೈಸೂರು)–2, ಎ.ಆರ್‌.ಗೌಡ (ಶಿಕ್ಷಣ; ಉತ್ತರ ಕನ್ನಡ)–3;

ಹೈಜಂಪ್‌: ಎಂ.ಎಂ.ಪ್ರಭಾಕರ (ಶಿಕ್ಷಣ; ಚಾಮರಾಜನಗರ)–1, ಎಂ.ಎಸ್‌.ಪ್ರವೀಣ (ನ್ಯಾಯಾಂಗ; ದಾವಣಗೆರೆ)–2, ಎಚ್‌.ಎ.ಭರತ್‌ (ಶಿಕ್ಷಣ; ತುಮಕೂರು)–3.

45 ವರ್ಷದ ಮೇಲಿನವರು

800 ಮೀ. ಓಟ: ಭಾಸ್ಕರ್‌ ವಿ.ನಾಯ್ಕ್‌ (ಶಿಕ್ಷಣ; ಉತ್ತರ ಕನ್ನಡ)–1, ಬಿ.ಮೂರ್ತಿ (ಶಿಕ್ಷಣ; ಶಿವಮೊಗ್ಗ)–2, ನರಸಿಂಹ ಸಿ.ವೈ (ಶಿಕ್ಷಣ; ಚಿಕ್ಕಬಳ್ಳಾಪುರ)–3.

ಮಹಿಳೆಯರು: 40 ವರ್ಷದೊಳಗಿನವರು:

200 ಮೀ. ಓಟ:ಡಾ.ಎಸ್‌.ನಳಿನಿ (ಆಯುಷ್‌; ಮೈಸೂರು)–1, ಆಶಾ (ಆರೋಗ್ಯ; ಉಡುಪಿ)–2, ಎ.ಎಸ್‌.ರಶ್ಮಿ (ಆರೋಗ್ಯ; ಚಿಕ್ಕಮಗಳೂರು)–3.

800 ಮೀ. ಓಟ: ಎನ್‌.ಸುನೀತಾ (ಶಿಕ್ಷಣ; ಬೆಂಗಳೂರು ಗ್ರಾ.)–1, ಕೆ.ಎನ್‌.ಅಶ್ವಿನ್‌ (ಶಿಕ್ಷಣ; ಚಿಕ್ಕಮಗಳೂರು)–2, ಎಸ್‌.ತಬ ಸುಮ್‌ (ಶಿಕ್ಷಣ; ಕೋಲಾರ)–3.

ಲಾಂಗ್‌ ಜಂಪ್‌: ಸ್ಮಿತಾ ಜೋಷ್ನಾ ಫರ್ನಾಂಡಿಸ್‌ (ಶಿಕ್ಷಣ; ಉಡುಪಿ)–1, ದೀಪಿಕಾ (ಶಿಕ್ಷಣ; ದಕ್ಷಿಣ ಕನ್ನಡ)–2, ಎಂ.ಬಿ.ಗಂಗಮ್ಮ (ಶಿಕ್ಷಣ; ತುಮಕೂರು)–3.

40 ವರ್ಷ ಮೇಲಿನವರು

200 ಮೀ: ಗ್ರೇಟಾ ಮಸ್ಕರೇನ್ಹಸ್‌ (ಶಿಕ್ಷಣ; ಉಡುಪಿ)–1, ಗೀತಾ (ಶಿಕ್ಷಣ; ಉಡುಪಿ)–2, ಬಿ.ಸಿ.ಶರ್ಮಿಳಾ (ಶಿಕ್ಷಣ; ಬೆಂಗಳೂರು ನಗರ)–3;

800 ಮೀ: ಎಂ.ಎಸ್‌.ಸರೋಜಾ (ಶಿಕ್ಷಣ; ಮೈಸೂರು)–1, ಸರೋಜಿನಿ (ಶಿಕ್ಷಣ; ದಕ್ಷಿಣ ಕನ್ನಡ)–2, ಮಾಲಿನಿ (ನ್ಯಾಯಾಲಯ; ಉಡುಪಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT