ಅಟ್ಯಾಪಟ್ಯಾ: ಭಾರತ ತಂಡಕ್ಕೆ ಪ್ರಶಸ್ತಿ

ಶುಕ್ರವಾರ, ಏಪ್ರಿಲ್ 19, 2019
30 °C

ಅಟ್ಯಾಪಟ್ಯಾ: ಭಾರತ ತಂಡಕ್ಕೆ ಪ್ರಶಸ್ತಿ

Published:
Updated:
Prajavani

ಹುಬ್ಬಳ್ಳಿ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಇತ್ತೀಚಿಗೆ ಭೂತಾನ್‌ನ ಮಸ್ಸೆಯಲ್ಲಿ ನಡೆದ ಐದನೇ ಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಭಾರತ, ಭೂತಾನ್‌, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದವು. ಭಾರತದ ಪುರುಷರ ತಂಡ ಫೈನಲ್‌ನಲ್ಲಿ 35–20, 30–15ರಲ್ಲಿ ಭೂತಾನ್‌ ತಂಡವನ್ನು ಸೋಲಿಸಿತು.

ಭಾರತ ತಂಡದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಸಂತೋಷ ನಾಯ್ಕ ಮತ್ತು ಚಂದರಗಿ ಕ್ರೀಡಾಶಾಲೆಯ ಸಂಪತ್‌ ಯರಗಟ್ಟಿ ಇದ್ದರು. ಸಂಪತ್ ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯವರು. ಕರ್ನಾಟಕ ಅಟ್ಯಾಪಟ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿ.ಡಿ. ಪಾಟೀಲ ಪುರುಷರ ತಂಡಕ್ಕೆ ತರಬೇತುದಾರರಾಗಿದ್ದರು.

ಭಾರತ ಮಹಿಳಾ ತಂಡ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ 25–16, 22–12ರಲ್ಲಿ ಭೂತಾನ್‌ ಎದುರು ಗೆಲುವು ಸಾಧಿಸಿ ಚಾಂಪಿಯನ್‌ ಎನಿಸಿತು.

ಈ ತಂಡವನ್ನು ಹುಬ್ಬಳ್ಳಿಯ ಅನಿತಾ ಬಿಚಗಟ್ಟಿ ಮುನ್ನಡೆಸಿದ್ದರು. ಗಜೇಂದ್ರಗಡ ತಾಲ್ಲೂಕಿನ ಜಕ್ಕಲಿ ಗ್ರಾಮದ ಭೀಮವ್ವ ಪೂಜಾರ ಕೂಡ ತಂಡದಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !